Monday, September 28, 2026
ಸುದ್ದಿ

ಚುನಾವಣಾ ಅಖಾಡಕ್ಕೆ ಬಿಜೆಪಿ ಸಜ್ಜು – ಸೆ.29ರಂದು ಎಲ್ಲಾ ರಾಜ್ಯ ಉಸ್ತುವಾರಿಗಳ ಸಭೆ ಕರೆದ ನಿತಿನ್‌ ನಬಿನ್-ಕಹಳೆನ್ಯೂಸ್

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಬಿಜೆಪಿ  ಈಗಿನಿಂದಲೇ ತಯಾರಿ ಆರಂಭಿಸಿದೆ. ಭರ್ಜರಿ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮುಂದಡಿ ಇಟ್ಟಿದೆ. ಅದಕ್ಕಾಗಿಯೇ ಸೆಪ್ಟೆಂಬರ್ 29ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್  ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ನೂತನ ರಾಜ್ಯ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳ ಮಹತ್ವದ ಸಭೆ ಕರೆದಿದ್ದಾರೆ.

ಜಾಹೀರಾತು

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಪಂಜಾಬ್, ಗೋವಾ ಮತ್ತು ಉತ್ತರಾಖಂಡದಂತಹ ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗುತ್ತದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಅಲ್ಲದೇ, ರಾಜಕೀಯ ವಿಚಾರಗಳನ್ನ ರಾಜ್ಯಗಳ ತಳಮಟ್ಟದಿಂದ ಎದುರಿಸುವುದು ಹೇಗೆ ಅನ್ನೋದರ ಬಗ್ಗೆಯೂ ಚರ್ಚೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗಷ್ಟೇ ಬಿಜೆಪಿ ಹಲವು ರಾಜ್ಯಗಳ ಉಸ್ತುವಾರಿಗಳನ್ನ ಬದಲಾವಣೆ ಮಾಡಿ ಮಹತ್ವದ ಪುನರ್‌ರಚನೆ ಮಾಡಿತ್ತು. ರಾಜಕೀಯವಾಗಿ ಪ್ರಮುಖವಾಗಿರುವ ಹಲವು ರಾಜ್ಯಗಳ ಜವಾಬ್ದಾರಿಯನ್ನ ಅನುಭವಿ ನಾಯಕರಿಗೆ ವಹಿಸಲಾಗಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ತನ್ನ ಸಂಘಟನಾ ತಂಡವನ್ನು ಮತ್ತಷ್ಟು ಬಲಪಡಿಸಿದೆ.

ಸಂಘಟನಾ ಪುನರ್‌ರಚನೆಯ ಬಳಿಕ ನಿತಿನ್ ನಬಿನ್ ಅವರು ನೂತನ ರಾಜ್ಯ ಉಸ್ತುವಾರಿಗಳೊಂದಿಗೆ ನಡೆಸಲಿರುವ ಮೊದಲ ಸಭೆ ಇದಾಗಿದೆ. ಇದೇ ತಂಡವು 2029ರ ಲೋಕಸಭಾ ಚುನಾವಣೆಯವರೆಗೂ ಪಕ್ಷದ ರಾಜ್ಯಮಟ್ಟದ ಸಂಘಟನಾ ಜವಾಬ್ದಾರಿ ಮುನ್ನಡೆಸುವ ಸಾಧ್ಯತೆಯೂ ಇದೆ.