Monday, September 28, 2026
ಸುದ್ದಿ

ಶಿವಮೊಗ್ಗ | ತ್ಯಾವರೆಕೊಪ್ಪ ಮೃಗಾಲಯದಲ್ಲಿ 4 ಸಿಂಹದ ಮರಿಗಳು ಸಾವು – ಕಹಳೆ ನ್ಯೂಸ್

ಶಿವಮೊಗ್ಗ: ಜನಿಸಿದ ಎರಡೇ ದಿನಗಳಲ್ಲಿ 4 ಸಿಂಹದ ಮರಿಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜಾಹೀರಾತು

ಶಿವಮೊಗ್ಗ ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಮೃಗಾಲಯದಲ್ಲಿ 5 ವರ್ಷದ ಏಷ್ಯಾಟಿಕ್ ಸಿಂಹ ‘ಸಾರಾ’ ಜನ್ಮ ನೀಡಿದ್ದ 4 ಮರಿಗಳು ಸಾವನ್ನಪ್ಪಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸೆ.16 ರಂದು 4 ಮರಿಗಳಿಗೆ ಸಿಂಹಿಣಿ ‘ಸಾರಾ’ ಜನ್ಮ ನೀಡಿತ್ತು. ಜನಿಸಿದ ಎರಡು ದಿನದಲ್ಲೇ ನಾಲ್ಕೂ ಮರಿಗಳು ಮೃತಪಟ್ಟಿವೆ. ಸಿಂಹಿಣಿ ಸಾರಾ ತಾಯ್ತನದ ಕೊರತೆಯಿಂದ ಮರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ಚೊಚ್ಚಲ ತಾಯ್ತನ ನಿರ್ವಹಣೆಯಲ್ಲಿ ಸಾರಾ ವಿಫಲವಾಗಿದೆ. ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದಲ್ಲಿರುವ ಮೃಗಾಲಯಕ್ಕೆ 2025 ರಲ್ಲಿ ಪ್ರಾಣಿ ವಿನಿಮಯ ಯೋಜನೆ ಭಾಗವಾಗಿ ಅಳವಿನಂಚಿನ ಪ್ರಭೇಧದ ಸಂತಾನೋತ್ಪತ್ತಿ ಉದ್ದೇಶದಿಂದ ಮಧ್ಯಪ್ರದೇಶದ ಇಂದೋರ್ ನಿಂದ ‘ಶಿವ’ ಹಾಗೂ ‘ಸಾರಾ’ ಏಷ್ಯಾಟಿಕ್ ಸಿಂಹಗಳನ್ನ ಕರೆತರಲಾಗಿತ್ತು. ಈ ಮರಿಗಳ ಸಾವಿನಿಂದ ಪ್ರಾಣಿಗಳ ವಿನಿಮಯ- ಸಂತಾನೋತ್ಪತ್ತಿ ಉದ್ದೇಶಕ್ಕೆ ಹಿನ್ನಡೆಯಾಗಿದೆ.