
ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ಸುದೀರ್ಘ ವಿರಾಮ ಪಡೆದುಕೊಂಡಿದ್ದ ಸ್ಟಾರ್ ನಟಿ ಕತ್ರಿನಾ ಕೈಫ್ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಆ ಮೂಲಕ ತಾವು ಚಿತ್ರರಂಗ ತೊರೆದಿಲ್ಲ ಎಂಬ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ಮದುವೆಯ ನಂತರ ಕತ್ರಿನಾ ಕೈಫ್ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಅವರು ಚಿತ್ರರಂಗಕ್ಕೆ ಗುಡ್‌ಬೈ ಹೇಳಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ನಟಿ ಅನುಷ್ಕಾ ಶರ್ಮಾ ಸೇರಿದಂತೆ ಹಲವು ನಟಿಯರು ಮದುವೆಯ ಬಳಿಕ ಸಿನಿಮಾದಿಂದ ದೂರ ಸರಿದಂತೆ, ಕತ್ರಿನಾ ಕೂಡ ಅದೇ ಹಾದಿ ಹಿಡಿಯಲಿದ್ದಾರೆ ಎಂದು ಬಿ-ಟೌನ್‌ನಲ್ಲಿ ಮಾತನಾಡಿಕೊಳ್ಳಲಾಗಿತ್ತು. ಆದರೆ ಈ ಎಲ್ಲಾ ವದಂತಿಗಳಿಗೆ ಬ್ರೇಕ್ ಬಿದ್ದಿದ್ದು, ಕತ್ರಿನಾ ಕೈಫ್ ಭರ್ಜರಿ ಕಮ್‌ಬ್ಯಾಕ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ.
ಸುದೀರ್ಘ ವಿರಾಮದ ನಂತರ ಮತ್ತೆ ಬಣ್ಣ ಹಚ್ಚುವುದಕ್ಕೆ ಕತ್ರಿನಾ ರೆಡಿ ಆಗುತ್ತಿದ್ದಾರೆ. ಅಜಯ್ ಬಹ್ಲ್ ನಿರ್ದೇಶನದ ಚಾಂದಿನಿ ಬಾರ್ 2 ಸಿನಿಮಾದ ಮೂಲಕ ಕತ್ರಿನಾ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ.











