Friday, July 31, 2026
ಕೇರಳರಾಜ್ಯಸುದ್ದಿ

ಮಗುವಿನ ಚಿಕಿತ್ಸೆಗಾಗಿ ದಾನಿಗಳ ಸಹಾಯಹಸ್ತದ ನೆರವಿಗೆ ಮನವಿ – ಕಹಳೆ ನ್ಯೂಸ್

ಪಜ್ಜಾನ ಸಮೀಪದ ಕರೋಡಿ ಗ್ರಾಮದ ಸುನಿಲ್ ಕುಮಾರ್ ಹಾಗೂ ಮಂಜುಳಾ ನಾಯಕ್ ದಂಪತಿಗಳ ಮಗಳಾದ 1.5 ವರ್ಷದ ಶಿವಾಂಶಿ ಎಂಬ ಪುಟ್ಟ ಮಗುವಿನ ಮೇಲೆ ಅಡುಗೆಗಾಗಿ ಕುದಿಸಿ ಇರಿಸಿದ್ದ ಬಿಸಿ ನೀರು ಆಕಸ್ಮಿಕವಾಗಿ ಮೈಮೇಲೆ ಬಿದ್ದ ಪರಿಣಾಮ, ಪುಟ್ಟ ಮಗು ಗಂಭೀರವಾಗಿ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಮಗುವಿನ ಚಿಕಿತ್ಸೆಗೆ ಸುಮಾರು ₹3 ರಿಂದ ₹4 ಲಕ್ಷ ವೆಚ್ಚವಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಗುವಿನ ತಂದೆ KGB ಬ್ಯಾಂಕ್‌ನ ಶೇಣಿ ಮಣಿಯಂಪಾರೆ ಶಾಖೆಯಲ್ಲಿ ತಾತ್ಕಾಲಿಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಅಲ್ಪ ಆದಾಯವೇ ಕುಟುಂಬದ ಜೀವನಾಧಾರವಾಗಿದೆ. ಈ ಅನಿರೀಕ್ಷಿತ ದುರ್ಘಟನೆ ಕುಟುಂಬವನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ತಳ್ಳಿದ್ದು ಕುಟುಂಬ ಸಹೃದಯರಾದ ಸಮಾಜದ ಬಂಧುಗಳ ಸಹಾಯ ಯಾಚಿಸುತ್ತಿದೆ.

ಸಹಾಯಹಸ್ತ ನೀಡುವವರು

BANK DETAILS

NAME: SUNIL KUMAR D

A/C NO : 40716101000681

IFSC: KLGB0040716

KERALA GRAMIN BANK SHENI BRANCH

MOB NO:9048942533