
ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಕಲಾ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬಹುವಚನಂ ಪುತ್ತೂರು ಇದರ ಮುಖ್ಯಸ್ಥರಾದ ಡಾ.ಶ್ರೀಶ ಕುಮಾರ್ ಎಂ.ಕೆ ಇವರು ಆಗಮಿಸಿ ದೀಪ ಪ್ರಜ್ವಲನೆಗೈದು, ಕಾರ್ಯಕ್ರಮ ಉದ್ಘಾಟಿಸಿ &quoಣ;ಜಲ ಯೋಧರಾಗೋಣ ಬನ್ನಿ&quoಣ; ಎನ್ನುವ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ನೀಡಿದರು.
ನೀರಿನ ಮಹತ್ವವನ್ನು ಅರಿಯುವುದು ಮತ್ತು ಅದನ್ನು ಉಳಿಸುವುದು ಇವೆರಡರ ನಡುವೆ ದೊಡ್ಡ ಅಂತರವಿದೆ. ಇಂದು ನೀರಿನ ಕೊರತೆ ಕೇವಲ ಬರಪೀಡಿತ ಪ್ರದೇಶಗಳ ಸಮಸ್ಯೆಯಲ್ಲ ನಗರಗಳಲ್ಲಿಯೂ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜಲ ಯೋಧರಾಗುವ ಅಗತ್ಯವಿದೆ ಎಂದು ತಿಳಿಸುತ್ತಾ ಹತ್ತು ವಿಧಾನಗಳ ಮೂಲಕ ಮಳೆನೀರು ಸಂರಕ್ಷಣೆಯ ಕುರಿತ
ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ವಹಿಸಿದ್ದರು. ಈ ಸಂದರ್ಭದಲ್ಲಿ ಕಲಾ ಸಂಘದ ಸಂಯೋಜಕರಾದ ಉಪನ್ಯಾಸಕಿ ಮೊನೀಷಾ ಎನ್, ಅಧ್ಯಕ್ಷರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಕ್ಷಮಾ ಪಿ ಸ್ವಾಗತಿಸಿ, ದೀಕ್ಷಾ ಎಂ. ಬಿ ನಿರೂಪಿಸಿ, ರಕ್ಷಿತಾ ವಂದಿಸಿದರು.











