Sunday, September 20, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಹಿಂದೂ ಜನಜಾಗೃತಿ ಸಮಿತಿಯಿಂದ ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನ: ‘ಹಲಾಲ್ ಪ್ರಮಾಣೀಕರಣ’ ನಿಲ್ಲಿಸುವಂತೆ ಒತ್ತಾಯ-ಕಹಳೆ ನ್ಯೂಸ್

ಪುತ್ತೂರು: ಭಾರತದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತರುತ್ತಿರುವ ‘ಹಲಾಲ್ ಪ್ರಮಾಣೀಕರಣ’ ವ್ಯವಸ್ಥೆಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ (HJS) ಯಿಂದ ಈ ದೀಪಾವಳಿಯಲ್ಲಿ ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನಕ್ಕೆ ಕರೆ ನೀಡಲಾಗಿದೆ.

ಜಾಹೀರಾತು

ಮೊದಲು ಮಾಂಸಾಹಾರಕ್ಕೆ ಸೀಮಿತವಾಗಿದ್ದ ‘ಹಲಾಲ್’, ಈಗ ಸಕ್ಕರೆ, ಎಣ್ಣೆ, ಹಿಟ್ಟು, ಸೌಂದರ್ಯ ವರ್ಧಕಗಳು ಮತ್ತು ಔಷಧಿಗಳಂತಹ ಎಲ್ಲಾ ಉತ್ಪನ್ನಗಳಿಗೂ ವಿಸ್ತರಿಸಿದೆ. ಭಾರತದ ಅಧಿಕೃತ ಸಂಸ್ಥೆಗಳಾದ FSSAI ಮತ್ತು FDA ಇರುವಾಗ, ಪ್ರತ್ಯೇಕ ಧಾರ್ಮಿಕ ಪ್ರಮಾಣಪತ್ರದ ಅಗತ್ಯವೇನು ಎಂದು ಸಮಿತಿಯು ಪ್ರಶ್ನಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮುಖ ಆಕ್ಷೇಪಣೆಗಳು:

ಬಹುಸಂಖ್ಯಾತರ ಮೇಲೆ ಹೇರಿಕೆ: ಕೇವಲ ಶೇ. 15ರಷ್ಟು ಮುಸ್ಲಿಮರಿಗಾಗಿ ಶೇ. 85ರಷ್ಟು ಹಿಂದೂಗಳ ಮೇಲೆ ‘ಹಲಾಲ್’ ಉತ್ಪನ್ನಗಳನ್ನು ಹೇರಿಕೆ ಮಾಡಲಾಗುತ್ತಿದೆ.

ಆರ್ಥಿಕ ದುರುಪಯೋಗದ ಆತಂಕ: ‘ಹಲಾಲ್’ನಿಂದ ಬರುವ ಹಣವು ದೇಶದ ಭದ್ರತೆಗೆ ಹಾನಿ ಮಾಡುವ ಶಕ್ತಿಗಳಿಗೆ ಬಳಕೆಯಾಗುವ ಸಾಧ್ಯತೆ ಇದೆ ಎಂದು ಸಮಿತಿ ಎಚ್ಚರಿಸಿದೆ.

ಹಲಾಲ್ ಜಿಹಾದ್: ಈ ವ್ಯವಸ್ಥೆಯನ್ನು ಜಾಗತಿಕ ಆರ್ಥಿಕ ಯುದ್ಧ ಅಥವಾ ‘ಹಲಾಲ್ ಜಿಹಾದ್’ ಎಂದು ಕರೆದಿದ್ದು, ಭಾರತೀಯ ಆರ್ಥಿಕತೆಯನ್ನು ಉಳಿಸಲು ಇದನ್ನು ವಿರೋಧಿಸಬೇಕು ಎಂದು ಸಮಿತಿ ಹೇಳಿದೆ.

ಒಬ್ಬ ರಾಷ್ಟ್ರಭಕ್ತನಾಗಿ, ಮಾಲ್‌ಗಳು ಮತ್ತು ಮಾರುಕಟ್ಟೆಗಳಲ್ಲಿ ‘ಹಲಾಲ್ ಪ್ರಮಾಣಿತ’ ಉತ್ಪನ್ನಗಳ ಮಾರಾಟವನ್ನು ತಕ್ಷಣ ನಿಲ್ಲಿಸಿ, ‘ಹಲಾಲ್ ಮುಕ್ತ’ ಭಾರತ ನಿರ್ಮಾಣದ ದೃಷ್ಟಿಯಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.

ಅಕ್ರಮ ‘ಹಲಾಲ್ ಪ್ರಮಾಣೀಕರಣ’ ವ್ಯವಸ್ಥೆಯ ಮೇಲೆ ದೇಶಾದ್ಯಂತ ನಿಷೇಧ ಹೇರುವ ಕುರಿತು ಮನವಿ ಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಪುತ್ತೂರು ನ ಶಿರಸ್ತೆ ದಾರರದ ಪಿ.ಎಸ್ ರವಿ ಕುಮಾರ್ ಮೂಲಕ ಮನವಿ ಕೊಡಲಾಯಿತು.

ಈ ಸಂದರ್ಭದಲ್ಲಿ ಧರ್ಮ ಪ್ರೇಮಿಗಳಾದ ಶ್ರೀ ಚಂದ್ರ ಶೇಖರ ಪಾಟಲಿ , ಶ್ರೀ ಆನಂದ ಪುತ್ತೂರು, ಬೊಲುವಾರು ಶ್ರಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಟ್ರಸ್ಟಿ ಶ್ರೀ ಪ್ರಸನ್ನ ಬಳ್ಳಾಲ್, ಬೊಲ್ಲರಾಬೈಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಟ್ರಸ್ಟಿ ಶ್ರೀ ಬಾಳ ಸುಬ್ರಹ್ಮಣ್ಯ ಭಟ್, ಉದ್ಯಮಿ ಶ್ರೀ ಶಶಾಂಕ್ ಕೋಟೇಚ್ಚ, ಕಾರ್ಪಾಡಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಶ್ರೀ ರಾಧಾಕೃಷ್ಣ ರೈ ಬುಡಿಯಾರ್, ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.