Sunday, September 20, 2026
ಬೆಳ್ತಂಗಡಿಸುದ್ದಿ

ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ,ಮುಗೇರಡ್ಕ -ಮೊಗ್ರು ಗ್ರಾಮ ಶ್ರೀ ರಾಮ ಶಿಶುಮಂದಿರದ ನೂತನ ಕಟ್ಟಡದ ಮಹಾಪೋಷಕರಾದ ಶಾಸಕ ಹರೀಶ್ ಪೂಂಜಾರವರು ಶಿಶುಮಂದಿರಕ್ಕೆ ಭೇಟಿ – ಕಹಳೆ ನ್ಯೂಸ್

ಮೊಗ್ರು : ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ,ಮುಗೇರಡ್ಕ -ಮೊಗ್ರು ಗ್ರಾಮ ಶ್ರೀ ರಾಮ ಶಿಶುಮಂದಿರದ ನೂತನ ಕಟ್ಟಡದ ಮಹಾಪೋಷಕರಾದ ಶಾಸಕ ಹರೀಶ್ ಪೂಂಜಾರವರು ಶಿಶುಮಂದಿರಕ್ಕೆ ಭೇಟಿ ನೀಡಿ ಮಕ್ಕಳ ಕುಶಲೋಪಚಾರ ವಿಚಾರಿಸಿ, ಮಕ್ಕಳ ಧಾರ್ಮಿಕ ಶಿಕ್ಷಣಕ್ಕೆ ಪೂರಕವಾದ ನೂತನ ಕಟ್ಟಡ ನಿರ್ಮಾಣ ಗೊಂಡ ಮಕ್ಕಳ ಅನ್ನ ಯಜ್ಞದ ಕೊಠಡಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಶು ಮಂದಿರದ ಸಂಚಾಲಕರಾದ ಪ್ರವೀಣ್ ಮತ್ತಿಲಾರು, ಮಾಜಿ ಅಧ್ಯಕ್ಷರಾದ ರಮೇಶ್ ನೆಕ್ಕರಾಜೆ, ಬಂದಾರು ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಮಾಜಿ ಸದಸ್ಯರಾದ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ ಹಾಗೂ ವಿನಯ ಬರುಂಗುಡೇಲು , ಶಿಶು ಮಂದಿರದ ಮಾತಾಜಿಗಳು ಉಪಸ್ಥಿತರಿದ್ದರು. ಶಾಸಕರನ್ನು ಪುಟಾಣಿಗಳು ಹೂ ನೀಡುವ ಮೂಲಕ ಸ್ವಾಗತಿಸಿ , ಸಂಚಾಲಕರು ಗೌರವಾರ್ಪಣೆ ಮಾಡಿದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು