ದೀರ್ಘ ಹೋರಾಟದ ಬಳಿಕ ಉಪ್ಪಿನಂಗಡಿ–ಇಳಂತಿಲ–ಮುರಕ್ಕೆ KSRTC ಬಸ್ ಆರಂಭ – – ಕಹಳೆ ನ್ಯೂಸ್

ಉಪ್ಪಿನಂಗಡಿ :ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ–ಇಳಂತಿಲ–ಮುರ ಗ್ರಾಮೀಣ ಮಾರ್ಗದಲ್ಲಿ ಸಾರ್ವಜನಿಕರ ಬಹುದಿನದ ಬೇಡಿಕೆಯಂತೆ KSRTC ಬಸ್ ಸೇವೆ ಆರಂಭವಾಗಿದೆ. ಇದರಿಂದ ವಿದ್ಯಾರ್ಥಿಗಳು, ಮಹಿಳೆಯರು, ಉದ್ಯೋಗಿಗಳು ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ದೊರೆತಂತಾಗಿದೆ.
ಈ ಮಾರ್ಗದಲ್ಲಿ ಬಸ್ ಸೇವೆ ಆರಂಭಿಸುವಂತೆ ಸ್ಥಳೀಯ ಸಾರ್ವಜನಿಕರು ದೀರ್ಘಕಾಲದಿಂದ ಮನವಿ, ಪತ್ರವ್ಯವಹಾರ ಹಾಗೂ ವಿವಿಧ ಸರ್ಕಾರಿ ಹಂತಗಳಲ್ಲಿ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದರು. ಜನಸ್ಪಂದನ ದೂರು, PMO ಸೇರಿದಂತೆ ವಿವಿಧ ಹಂತಗಳಲ್ಲಿ ಮನವಿಗಳನ್ನು ಸಲ್ಲಿಸಲಾಗಿತ್ತು. ಕರ್ನಾಟಕ ಲೋಕಾಯುಕ್ತರ ಕಚೇರಿಯ ಗಮನಕ್ಕೂ ವಿಷಯವನ್ನು ತರಲಾಗಿತ್ತು ಹಾಗೂ ಅವರ ಸೂಚನೆಯ ಮೇರೆಗೆ ಕ್ರಮ ಕೈಗೊಳ್ಳಲಾಯಿತು.
ಕೊನೆಗೂ ನಿರಂತರ ಒತ್ತಾಯ, ಲೋಕಾಯುಕ್ತರ ಕಚೇರಿಯ ಸೂಚನೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕ್ರಮ ಮತ್ತು ಸಹಕಾರದಿಂದ ಈ ಮಾರ್ಗದಲ್ಲಿ KSRTC ಬಸ್ ಸೇವೆ ಆರಂಭವಾಗಿದೆ.
ಪ್ರಸ್ತುತ ಪ್ರಸ್ತಾಪಿಸಿರುವ ವೇಳಾಪಟ್ಟಿ:
ಸಮಯ ಮಾರ್ಗ
ಬೆಳಿಗ್ಗೆ 8:10 ಉಪ್ಪಿನಂಗಡಿ → ಇಳಂತಿಲ → ಮುರ
ಬೆಳಿಗ್ಗೆ 8:35 ಮುರ → ಇಳಂತಿಲ → ಉಪ್ಪಿನಂಗಡಿ
ಸಂಜೆ 4:15 ಉಪ್ಪಿನಂಗಡಿ → ಇಳಂತಿಲ → ಮುರ
ಸಂಜೆ 4:35 ಮುರ → ಇಳಂತಿಲ → ಉಪ್ಪಿನಂಗಡಿ
“ಬಸ್ ಸೇವೆ ಆರಂಭವಾಗಿರುವುದು ಸಂತೋಷದ ವಿಷಯ. ಆದರೆ ಸಾರ್ವಜನಿಕರಿಗೆ ಅನುಕೂಲವಾಗುವ ಸಮಯದಲ್ಲಿ ಸೇವೆ ದೊರೆತರೆ ಇನ್ನಷ್ಟು ಜನರು ಪ್ರಯಾಣಿಸಬಹುದು. ಪ್ರಯಾಣಿಕರ ಬಳಕೆ ಹೆಚ್ಚಾದರೆ ಗ್ರಾಮೀಣ ಭಾಗದ ಈ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಯಲು ಸಹಕಾರಿಯಾಗುತ್ತದೆ” ಎಂದು ಸ್ಥಳೀಯ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಬಸ್ ಸೇವೆ ಆರಂಭವಾಗಲು ವಿವಿಧ ಹಂತಗಳಲ್ಲಿ ಸ್ಪಂದಿಸಿ, ಕ್ರಮ ಕೈಗೊಂಡು ಹಾಗೂ ಸಹಕಾರ ನೀಡಿದ ಎಲ್ಲಾ ಇಲಾಖೆಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಉಪ್ಪಿನಂಗಡಿ–ಇಳಂತಿಲ–ಮುರ ಮಾರ್ಗದ ಸಾರ್ವಜನಿಕರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಾರೆ:











