Sunday, September 20, 2026
ಜಿಲ್ಲೆದಕ್ಷಿಣ ಕನ್ನಡಸುದ್ದಿ

ಕೌಟುಂಬಿಕ ಕಲಹಕ್ಕೆ 3 ವರ್ಷದ ಮಗು ಬಲಿ – ಕಹಳೆ ನ್ಯೂಸ್

ಮಂಗಳೂರು: ಕೌಟುಂಬಿಕ ಕಲಹಕ್ಕೆ 3 ವರ್ಷದ ಮಗು ಬಲಿಯಾಗಿರುವ ಘಟನೆ ಉಪ್ಪಿನಂಗಡಿ  ಪೋಲೀಸ್ ಠಾಣಾ ವ್ಯಾಪ್ತಿಯ ಪೆರ್ನೆ  ಎಂಬಲ್ಲಿ ನಡೆದಿದೆ.

ಜಾಹೀರಾತು

ನೂರುನ್ನೀಸಾ (28) ಮತ್ತು ಆಕೆಯ ಪತಿ ಸಿನಾನ್ (32) ಮಧ್ಯೆ ಇಂದು ಫೋನ್‌ನಲ್ಲಿ ಕಲಹ ನಡೆದಿತ್ತು. ಇದರಿಂದ ಕೋಪಗೊಂಡ ನೂರುನ್ನೀಸಾ ಪತಿಯ ತಂಗಿಯ ಮಗು ಮತ್ತು ಆಕೆಯ ಸ್ವಂತ ಮಗುವನ್ನು ಬಾವಿಗೆ ಎಸೆದಿದ್ದಳು. ಸ್ಥಳೀಯರು ಬಂದು ಎರಡೂ ಮಕ್ಕಳನ್ನು ಬಾವಿಯಿಂದ ಮೇಲೆಕ್ಕೆತ್ತಿದ್ದರು. ಆದರೆ ಪತಿ ತಂಗಿಯ ಮಗು ಸಾವನ್ನಪ್ಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನೂರುನ್ನೀಸಾಳ ಮೂರೂವರೆ ವರ್ಷದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೋಲೀಸರು ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.