Sunday, September 20, 2026
ಸುದ್ದಿ

ಯುದ್ಧ ಕೊನೆಗೊಳಿಸಲು ಇರಾನ್‌ ವೇಯ್ಟಿಂಗ್‌ – ಇತ್ತ ಬ್ರಿಟನ್‌ ವಾಯುನೆಲೆಯಿಂದ B-1B ಬಾಂಬರ್‌ ಟೇಕಾಫ್‌! – ಕಹಳೆ ನ್ಯೂಸ್

ಲಂಡನ್‌: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ಸಂದರ್ಭದಲ್ಲೇ, ಬ್ರಿಟನ್‌ನ RAF ಫೇರ್‌ಫೋರ್ಡ್‌ ವಾಯುನೆಲೆಯಿಂದ ಅಮೆರಿಕದ B-1B ಬಾಂಬರ್‌  ಯುದ್ಧ ವಿಮಾನ ಹೊರಟಿದೆ ಎಂದು ವರದಿಯಾಗಿದೆ.
ಇತ್ತ ಯುದ್ಧ ಕೊನೆಗೊಳಿಸಲು ಅಮೆರಿಕದ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದು ಕಾಕತಾಳಿಯವೋ ಅಥವಾ ಅಮೆರಿಕ ಮತ್ತೆ ಕೊಟ್ಟ ಯುದ್ಧದ ಎಚ್ಚರಿಕೆಯೋ? ಅನ್ನೋದು ಪ್ರಶ್ನೆಯಾಗಿದೆ.

ಜಾಹೀರಾತು

ಅಮೆರಿಕದ (America) ದೀರ್ಘ-ಶ್ರೇಣಿಯ ಬಾಂಬರ್‌ ಬ್ರಿಟನ್‌ನ ವಾಯುನೆಲೆಯಿಂದ ಟೇಕಾಫ್‌ ಆಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. RAF ಫೇರ್‌ಫೋರ್ಡ್‌ನಿಂದ ಇರಾನ್‌ ತಲುಪಲು ಸುಮಾರು 6 ರಿಂದ 8 ಗಂಟೆಗಳಷ್ಟು ಹಾರಾಟದ ಸಮಯ ಅಗತ್ಯವಿದೆ. ಆದರೆ, ಈ ವಿಮಾನದ ನಿಖರ ಕಾರ್ಯಾಚರಣೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರ್‌ಎಎಫ್‌ ಫೇರ್‌ಫೋರ್ಡ್‌ನಲ್ಲಿ ಅಮೆರಿಕದ ಬಾಂಬರ್‌ಗಳ ನಿಯಮಿತ ನಿಯೋಜನೆ ಹಾಗೂ ತರಬೇತಿ ಕಾರ್ಯಾಚರಣೆಗಳು ನಡೆಯುತ್ತಿರುತ್ತವೆ. ಹೀಗಾಗಿ, ಬಾಂಬರ್‌ವೊಂದು ಅಲ್ಲಿಂದ ಹೊರಟಿರುವ ದೃಶ್ಯ ಮಾತ್ರ ಕಂಡುಬಂದಿದೆ. ಆದ್ರೆ ಬಾಂಬರ್‌ ಇರಾನ್‌ನತ್ತಲೇ ಹೊರಟಿದೆ ಅನ್ನೋದು ಇನ್ನೂ ಖಚಿತವಾಗಿಲ್ಲ.

ಕಳೆದ ಮಾರ್ಚ್‌ನಿಂದ ಇರಾನ್‌ನ ಗುರಿಗಳ ಮೇಲೆ ನಡೆದ ʻಆಪರೇಷನ್‌ ಎಪಿಕ್‌ ಫ್ಯೂರಿʼ ದಾಳಿಗಳಿಗೆ ಆರ್‌ಎಎಫ್‌ ಫೇರ್‌ಫೋರ್ಡ್‌ ಪ್ರಮುಖ ನೆಲೆಯಾಗಿ ಕಾರ್ಯನಿರ್ವಹಿಸಿದೆ. ಸುಮಾರು 1 ಡಜನ್‌ B-1B ಬಾಂಬರ್‌ಗಳು ಇನ್ನೂ ಈ ಬ್ರಿಟಿಷ್‌ ವಾಯುನೆಲೆಯಲ್ಲಿ ನಿಯೋಜಿತವಾಗಿವೆ ಎನ್ನಲಾಗಿದೆ. ಮತ್ತೊಂದು ಕಡೆ ಇರಾನ್‌ ತನ್ನ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಿದೆ ಎಂದು ಹೇಳಲಾಗಿದೆ. ಹೀಗಾಗಿ ಯುದ್ಧದ ಕಾರ್ಮೋಡ ಮತ್ತೆ ದಟ್ಟವಾಗಿದೆ ಎಂದು ವರದಿಗಳು ತಿಳಿಸಿವೆ.