
ಪುತ್ತೂರು: ಅಕ್ಟೋಬರ್ 17ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು ಸೀಸನ್–4’ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಪುತ್ತೂರು ಬೈಪಾಸ್‌ನ ಅಶ್ಮಿ ಕಂಫರ್ಟ್‌ನಲ್ಲಿ ನಡೆಯಿತು.
ಕಾರ್ಯಕ್ರಮದ ಸಿದ್ಧತೆಗಳು, ಆಯೋಜನೆಯ ರೂಪುರೇಷೆಗಳು ಹಾಗೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಪಿಲಿಗೊಬ್ಬು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪಿಲಿವೇಷ ತಂಡಗಳು ಭಾಗವಹಿಸುವಂತೆ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ವಿಜಯಸಾಮ್ರಾಟ್ ಪುತ್ತೂರು ಸಂಸ್ಥೆಯ ಸ್ಥಾಪಕಾಧ್ಯಕ್ಷ ಶ್ರೀ ಸಹಜ್ ರೈ ಬಳಜ್ಜ, ಪಿಲಿಗೊಬ್ಬು ಸಮಿತಿಯ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಶ್ರೀ ಶರತ್ ಆಳ್ವ ಕೂರೇಲು, ಕಾರ್ಯಾಧ್ಯಕ್ಷ ಶ್ರೀ ರತನ್ ರೈ ಕುಂಬ್ರ,ಸಹಸಂಚಾಲಕ ರಾಜೇಶ್ ರೈ ಪರ್ಪುಂಜ, ಉಪಾಧ್ಯಕ್ಷರಾದ ಶ್ರೀ ಶಂಕರ್ ಭಟ್ ಈಶಾನ್ಯ,ಪವನ್ ಶೆಟ್ಟಿ ಕಂಬಳತ್ತಡ್ಡ, ನಿತೇಶ್ ನೆಲಪ್ಪಾಲು,ಕಾರ್ಯದರ್ಶಿಗಳಾದ ಸುರೇಶ್ ಪಿದಪಟ್ಲ,ಧನುಷ್ ಹೊಸಮನೆ,ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಜೊತೆಕಾರ್ಯದರ್ಶಿಗಳಾದ ಆನಂದ ಗೌಡ ತೆಂಕಿಲ,ಪ್ರೀತಮ್ ಶೆಟ್ಟಿ ಪೆರ್ನೆ,ಗೌತಮ್ ಗೌಡ,ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ರೈ ಆನಾಜೆ,ಮಹೇಶ್ ಆಚಾರ್ಯ, ಕೋಶಾಧಿಕಾರಿಗಳಾದ ಅಶೋಕ್ ಅಡೂರು,ರಾಜೇಶ್ ಗೌಡ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪುತ್ತೂರಿನ ಸಾಂಸ್ಕೃತಿಕ ವೈಭವ ಹಾಗೂ ತುಳುನಾಡಿನ ವಿಶಿಷ್ಟ ಜನಪದ ಪರಂಪರೆಯನ್ನು ಪ್ರತಿಬಿಂಬಿಸುವ ಪಿಲಿಗೊಬ್ಬು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಸಭೆಯಲ್ಲಿ ಕರೆ ನೀಡಲಾಯಿತು.











