Sunday, September 20, 2026
ಸುದ್ದಿ

ಅಮೆರಿಕ ಸಂಕಷ್ಟದ ಸುಳಿಯಿಂದ ಹೊರಬರಲು ಬಯಸಿದ್ರೆ..: ಟ್ರಂಪ್‌ಗೆ 7 ಷರತ್ತು ವಿಧಿಸಿದ ಇರಾನ್‌ – ಕಹಳೆ ನ್ಯೂಸ್

ಟೆಹ್ರಾನ್: ಸೌದಿ ಅರೇಬಿಯಾ  ಮತ್ತು ಯೆಮೆನ್‌ನ ಹೌತಿಗಳ ನಡುವಿನ ಸಂಘರ್ಷದಿಂದಾಗಿ ತೀವ್ರಗೊಂಡಿರುವ ಮಧ್ಯಪ್ರಾಚ್ಯದ ಯುದ್ಧವನ್ನು ಕೊನೆಗೊಳಿಸಲು, ಇರಾನ್ ಅಮೆರಿಕಕ್ಕೆ ಏಳು ಷರತ್ತುಗಳನ್ನು ರವಾನಿಸಿದೆ.
ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಮೊಹ್ಸೆನ್ ರೆಜಾಯಿ ಅವರು ಶನಿವಾರ ಮಾತನಾಡಿ, ಏಳು ತಿಂಗಳುಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಟೆಹ್ರಾನ್ ತನ್ನ ಷರತ್ತುಗಳನ್ನು ತಿಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ.

ಜಾಹೀರಾತು

ಯಾವುದೇ ಮಾತುಕತೆಯನ್ನು ಆರಂಭಿಸಲು ಇರಾನ್ ವಿಧಿಸಿರುವ ಏಳು ಷರತ್ತುಗಳನ್ನು ಅಮೆರಿಕ ಸರ್ಕಾರಕ್ಕೆ ತಿಳಿಸಲಾಗಿದೆ. ಇರಾನ್ ಸಂದೇಶವು ಸ್ಪಷ್ಟವಾಗಿದೆ. ಅಮೆರಿಕ ತಾನೇ ಸೃಷ್ಟಿಸಿಕೊಂಡಿರುವ ಜಟಿಲ ಸಮಸ್ಯೆಯಿಂದ ಹೊರಬರಲು ಬಯಸಿದರೆ, ಇರಾನ್‌ನ ಷರತ್ತುಗಳನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಅದಕ್ಕೆ ಬೇರೆ ದಾರಿಯಿಲ್ಲ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶನಿವಾರ ಪ್ರಕಟವಾದ ಕತಾರ್‌ನ ‘ಅಲ್ ಜಜೀರಾ’ದೊಂದಿಗಿನ ಸಂದರ್ಶನವೊಂದರಲ್ಲಿ, ಎಲ್ಲಾ ರಂಗಗಳಲ್ಲಿನ ಯುದ್ಧವನ್ನು ಕೊನೆಗೊಳಿಸುವುದು, ಇರಾನ್‌ನಿಂದ ವಶಪಡಿಸಿಕೊಳ್ಳಲಾದ ಆಸ್ತಿಗಳನ್ನು ಬಿಡುಗಡೆ ಮಾಡುವುದು ಮತ್ತು ಇರಾನ್‌ನ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ಅಂತ್ಯಗೊಳಿಸುವುದು ಈ ಷರತ್ತುಗಳಲ್ಲಿ ಸೇರಿವೆ ಎಂದು ರೆಜಾಯಿ ಹೇಳಿದ್ದಾರೆ.

ಯೆಮೆನ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷ ಕೊನೆಗೊಳ್ಳಬೇಕೆಂದು ಇರಾನ್ ಬಯಸುತ್ತದೆ ಎಂದೂ ಅವರು ತಿಳಿಸಿದ್ದಾರೆ.