Recent Posts

Wednesday, May 6, 2026

ಪ್ರಾದೇಶಿಕ

ಪುತ್ತೂರು

ಪುತ್ತೂರಿನ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳತನ; ಅಪಾರ ಪ್ರಮಾಣದ ಚಿನ್ನಾಭರಣಗಳು ಕಳವು-ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಪ್ರತಿಷ್ಠಿತ ಶ್ರೀಧರ್ ಭಟ್ ಬ್ರದರ್ಸ್ ಅಂಗಡಿಯ ಪಕ್ಕದಲ್ಲಿರುವ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಪುತ್ತೂರು ನಗರ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಯಿಂದ ಕಳ್ಳತನ ನಡೆದ ಸ್ಥಳ ಕೇವಲ 50 ಮೀ ದೂರದಲ್ಲಿದೆ. ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ರಿಪೇರಿಗೆ ಬಂದ ಚಿನ್ನ ಸಹಿತ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವಾಗಿದೆ ಎನ್ನುವುದು ತಿಳಿದುಬಂದಿದೆ. ಕಳ್ಳತನ ನಡೆದಿರುವ ಜ್ಯುವೆಲರಿ ಶಾಪ್...
ಬಂಟ್ವಾಳ

ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖ್ದೇವ್ ಬಲಿದಾನದ ಸ್ಮರಣಾರ್ಥ, ಬಂಟ್ವಾಳ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಸಾರ್ವಜನಿಕ ಸಭೆ-ಕಹಳೆ ನ್ಯೂಸ್

ಬಂಟ್ವಾಳ : ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖ್ದೇವ್ ಬಲಿದಾನದ ಸ್ಮರಣಾರ್ಥ ಬಂಟ್ವಾಳ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಕೈಕಂಬದಿಂದ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಸ್ಪರ್ಶ ಕಲಾಮಂದಿರದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ವಕೀಲ ಹಾಗೂ ಹಿರಿಯ ಆರೆಸ್ಸೆಸ್ ಮುಖಂಡ ಪ್ರಸಾದ್ಕುಮಾರ್ ರೈ ಮಾತನಾಡಿ, ಪ್ರಾಣವನ್ನು ಅರ್ಪಿಸಿದ ಭಗತ್ ಸಿಂಗ್ ರಕ್ತದಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇತ್ತು ಎಂದರು. ಮಂಗಳೂರು ಕಾಲೇಜು...
ಪುತ್ತೂರು

ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯ ಕಾರ್ಯಕ್ರಮ: ವಿಶ್ವೇಶ್ವರಯ್ಯ ಸಭಾಭವನದಲ್ಲಿ ಮೇಳೈಸಿದ ಸಾಂಸ್ಕೃತಿಕ ಸ್ಪರ್ಧೆ- ಕಹಳೆ ನ್ಯೂಸ್

ಪುತ್ತೂರು: ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳಲ್ಲಿ ಸಂಭ್ರಮ, ಸಡಗರ. ತಾವು ಇಷ್ಟಪಟ್ಟ ವಿಷಯಕ್ಕೆ ಸಂಬ0ಧಪಟ್ಟ0ತೆ ವಿಧ ವಿಧದ ಪೋಷಾಕುಗಳನ್ನು, ವೇಷ ಭೂಷಣಗಳನ್ನು ಧರಿಸಿ ಪ್ರದರ್ಶನದ ಸರತಿಗಾಗಿ ಕಾದಿರುವ ಕಲಾವಿದರು. ತಮ್ಮ ಸಹಪಾಠಿಗಳ ಕಲಾವಂತಿಗೆಗೆ ಮೆಚ್ಚುಗೆಯ ಮಾಹಾಪೂರವನ್ನೇ ಹರಿಸುತ್ತಿರುವ ವಿದ್ಯಾರ್ಥಿ ಸಮೂಹ. ಇವೆಲ್ಲ ಕಂಡುಬ0ದದ್ದು ಪುತ್ತೂರಿನ ವಿವೇಕಾನಂದ ಇಂಜಿನಿಯರಿ0ಗ್ ಕಾಲೇಜಿನ ಆವರಣದಲ್ಲಿ. ಈ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯ ಕಾರ್ಯಕ್ರಮ ಕಲಾ ಕದನದ ಸಂದರ್ಭದಲ್ಲಿ. ಕಾಲೇಜಿನ ಭೂಮಿಕಾ ಕಲಾ ಸಂಘದ ಆಶ್ರಯದಲ್ಲಿ...
ಬೆಳ್ತಂಗಡಿ

ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು- ಕಹಳೆ ನ್ಯೂಸ್

ಬೆಳ್ತಂಗಡಿ: ಖಾಸಗಿ ಕಾಲೇಜೊಂದರ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿಯೋರ್ವಳು ಕಳೆದ ಮಾರ್ಚ್ 14ರಂದು ವಿಷ ಪದಾರ್ಥ ಸೇವಿಸಿ ಆತ್ಯಹತ್ಯೆಗೆ ಯತ್ನಿಸಿ, ಮಂಗಳೂರಿನ ಖಾಸಗಿ ಆಸ್ಪತ್ರಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಗಂಡಿ ಬಾಗಿಲು ದೇವಗಿರಿ ಚೇನಪಳ್ಳಿ ವಿಜು ಅವರ ಪುತ್ರಿ ವಿನ್ಸಿ (20) ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಳು. ಆದ್ರೆ ಸುಮಾರು 10 ದಿನಗಳ ಕಾಲ ನಡೆದ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾಳೆ....
ಪುತ್ತೂರು

ಅಂಬಿಕಾ ಸಮೂಹಸಂಸ್ಥೆಗಳ ವತಿಯಿಂದ ಬಲಿದಾನ್ ದಿವಸ್ ಆಚರಣೆ ತ್ಯಾಗ ಜೀವನದ ಅಂಗವಾಗಬೇಕು :ಡಾ.ವಿನಾಯಕ ಭಟ್ಟ ಗಾಳಿಮನೆ- ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಬಲಿದಾನ್ ದಿವಸ್ ಕಾರ್ಯಕ್ರಮವನ್ನು ಕಿಲ್ಲೆ ಮೈದಾನದ ಬಳಿ ಸಂಸ್ಥೆಯ ವತಿಯಿಂದ ಕಿಲ್ಲೆ ಮೈದಾನದ ಬಳಿ ಸ್ಥಾಪಿಸಲಾಗಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಮುಂದೆ ಮಂಗಳವಾರ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಬಲಿದಾನ್ ದಿವಸದ ಸಂದೇಶ ನೀಡಿದ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ತ್ಯಾಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ತ್ಯಾಗದ ಮಹತ್ವವನ್ನು...
ಪುತ್ತೂರು

ಪುತ್ತೂರು ನಗರ ವಿವೇಕಾನಂದ ಕಾಲೇಜಿನ ಬಳಿ ಇರುವ ಶ್ರೀ ವೀರಾಂಜನೇಯ ಕ್ಷೇತ್ರ ನೆಲಪ್ಪಾಲು ಇಲ್ಲಿ ಎಪ್ರಿಲ್ 25ರಂದು ಶ್ರೀ ರಾಮೋತ್ಸವ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ನಗರ ವಿವೇಕಾನಂದ ಕಾಲೇಜಿನ ಬಳಿ ಇರುವ ಶ್ರೀ ವೀರಾಂಜನೇಯ ಕ್ಷೇತ್ರ ನೆಲಪ್ಪಾಲು ಇಲ್ಲಿ ಎಪ್ರಿಲ್ 25ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃ ಮಂಡಳಿ, ದುರ್ಗಾವಾಹಿನಿ ಪುತ್ತೂರು ಜಿಲ್ಲೆ ಮತ್ತು ಶ್ರೀ ರಾಮೋತ್ಸವ ಸಮಿತಿ ಪುತ್ತೂರು ಹಾಗೂ ಶ್ರೀ ವೀರಾಂಜನೇಯ ಕ್ಷೇತ್ರ ನೆಲಪ್ಪಾಲು ಇವರ ಸಹಯೋಗದೊಂದಿಗೆ ಶ್ರೀ ರಾಮೋತ್ಸವ ಕಾರ್ಯಕ್ರಮವು ನಡೆಯಲಿದೆ. ಹಾಗೂ ಸಂಜೆ 3 ಗಂಟೆಗೆ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಬಳಿಯಿಂದ...
ಬಂಟ್ವಾಳ

ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದ ಶಾಸಕ ರಾಜೇಶ್ ನಾಯ್ಕ್-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕೋವಿಡ್ ಲಸಿಕೆ ಪಡೆದುಕೊಂಡರು. ಲಸಿಕೆ ಪಡೆದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕರು, ತಾನು ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಖಾಯಿಲೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ ಬಂಟ್ವಾಳದ ಜನತೆ ಕೋವಿಡ್ ಲಸಿಕೆ ಪಡೆಯುವಂತೆ ಮನವಿ ಮಾಡಿದರು. ಅಲ್ಲದೇ ಇದರಿಂದ ತಮಗೆ ಹಾಗೂ ಸಮಾಜಕ್ಕೆ ಒಳತಾಗುತ್ತದೆ. ಕೊರೊನಾದ...
ಪುತ್ತೂರು

ಕ್ಯಾಂಪ್ಕೋ ಉದ್ಯೋಗಿಗಳ ವಸತಿನಿಲಯದ ಸಭಾಂಗಣದಲ್ಲಿ ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರ್ ನ ವಾರ್ಷಿಕ ದಿನಾಚರಣೆ-ಕಹಳೆ ನ್ಯೂಸ್

ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರ್ ನ ವಾರ್ಷಿಕ ದಿನಾಚರಣೆಯು ಕ್ಯಾಂಪ್ಕೋ ಉದ್ಯೋಗಿಗಳ ವಸತಿನಿಲಯದ ಸಭಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣಕುಮಾರ್ ಎಚ್.ಎಂ ವ್ಯವಸ್ಥಾಪಕ ನಿರ್ದೇಶಕರು (ಪ್ರಭಾರ) ಕ್ಯಾಂಪ್ಕೋ ನಿಯಮಿತ ಮಂಗಳೂರು, ಪದ್ಮರಾಜ್ ಪಟ್ಟಾಜೆ ನಿರ್ದೆಶಕರು ಕ್ಯಾಂಪ್ಕೋ ನಿಯಮಿತ ಮಂಗಳೂರು, ರಾಘವೇಂದ್ರ ಭಟ್ ಕ್ಯಾಂಪ್ಕೋ ನಿಯಮಿತ ಮಂಗಳೂರು, ಮಹೇಶ್ ಚೌಟ ನಿರ್ದೆಶಕರು ಕ್ಯಾಂಪ್ಕೋ...
1 774 775 776 777 778 874
Page 776 of 874