ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸಹಾಯಧನ ಹಸ್ತಾಂತರ ಹಾಗೂ ಜನಜಾಗೃತಿ ವೇದಿಕೆ ಸದಸ್ಯರಿಂದ ಮನೆಗೆ ಉಚಿತವಾಗಿ ವಿದ್ಯುತ್ ವೈರಿಂಗ್ ವ್ಯವಸ್ಥೆಯ ಭರವಸೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮನೆ ಹೊತ್ತಿ ಉರಿದು ನಷ್ಟ ಸಂಭವಿಸಿದ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಗಣೇಶಕೋಡಿ ರಾಜೇಶ್ವರಿ ರವರಿಗೆ 10 ಸಾವಿರ ಮಂಜೂರಾಗಿದ್ದು ಇದನ್ನು ಮೇ 5 ಮಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ವೀರಪ್ಪ ಮೂಲ್ಯ ಬೆತಸರವ್ ಮನೆಯ ದುರಸ್ತಿಯ ವಿದ್ಯುತ್ ವ್ಯವಸ್ಥೆಯನ್ನು ತನ್ನ ವತಿಯಿಂದ ಉಚಿತವಾಗಿ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಲಡ್ಕ ವಲಯದ ಮೇಲ್ವಿಚಾರಕ ಸುಖರಾಜ್, ಶೌರ್ಯ ವೀಪತು ನಿರ್ವಹಣಾ ಘಟಕ ಕಲ್ಲಡ್ಕ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ನಿಯೋಜಿತ ಅಧ್ಯಕ್ಷ ಗಣೇಶ್, ಸದಸ್ಯರಾದ ಚಿನ್ನಾ ಕಲ್ಲಡ್ಕ, ಕಲ್ಲಡ್ಕ ವಲಯದ ಮಾಜಿ ಅಧ್ಯಕ್ಷ ಶೇಖರ ಕಾಣೆಕೋಡಿ, ವೀರ ಕಂಭ ಒಕ್ಕೂಟ ಅಧ್ಯಕ್ಷೆ ಶಾಂಭವಿ ಆಚಾರ್ಯ, ಪದಾಧಿಕಾರಿ ಪ್ರೇಮ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.









