Recent Posts

Tuesday, May 5, 2026
ರಾಜ್ಯಸುದ್ದಿ

ಎಮರ್ಜೆನ್ಸಿ ಕೋಡ್‌ ಕಳಿಸಿ ನಾಪತ್ತೆಯಾದ ಅಮೆರಿಕದ ʻಫ್ಲೆಯಿಂಗ್‌ ಗ್ಯಾಸ್‌ ಸ್ಟೇಷನ್‌ʼ -ಕಹಳೆ ನ್ಯೂಸ್

ವಾಷಿಂಗ್ಟನ್: ಅಮೆರಿಕದ ಮಿಲಿಟರಿ ವಿಮಾನಗಳಿಗೆ ಇಂಧನ ಪೂರೈಸಲು ನಿಯೋಜನೆಗೊಂಡಿದ್ದ ಬೋಯಿಂಗ್ KC-135 ಸ್ಟ್ರಾಟೋಟ್ಯಾಂಕರ್  ವಿಮಾನ ಇರಾನ್‌ನ ಪರ್ಷಿಯನ್ ಕೊಲ್ಲಿಯ ಮೇಲೆ ಹಾರುವಾಗ ಎಮರ್ಜೆನ್ಸಿ (7700) ಸಂಕೇತ ರವಾನಿಸಿ ನಾಪತ್ತೆಯಾಗಿದೆ. ವಿಮಾನದೊಳಗೆ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ದತ್ತಾಂಶದಲ್ಲಿ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

KC-135 ಸ್ಟ್ರಾಟೋಟ್ಯಾಂಕರ್ ಎಂದರೇನು?
KC-135 ಸ್ಟ್ರಾಟೋಟ್ಯಾಂಕರ್ ನಾಲ್ಕು ಟರ್ಬೊಫ್ಯಾನ್ ಎಂಜಿನ್‌ ಹೊಂದಿರುವ ಮಿಲಿಟರಿ ವಿಮಾನವಾಗಿದೆ. ಇದನ್ನು ಕಾರ್ಯಾಚರಣೆಯಲ್ಲಿರುವ ಯುದ್ಧ ವಿಮಾನಗಳಿಗೆ ಇಂಧನ ತುಂಬಲು ಬಳಸಲಾಗುತ್ತದೆ. ಇಂಧನ ತುಂಬುವ ವ್ಯವಸ್ಥೆಯ ಮೇಲೆ ಸರಕು ಸಾಗಾಣಿಕೆಗೆ ಅನುಕೂಲವಾಗುವ ರೀತಿಯಲ್ಲಿ ಈ ವಿಮಾನ ವಿನ್ಯಾಸಗೊಳಿಸಲಾಗಿದೆ. 60 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕ ವಾಯುಪಡೆಯ ಕಾರ್ಯಾಚರಣೆಗಳಲ್ಲಿ KC-135 ಸ್ಟ್ರಾಟೋಟ್ಯಾಂಕರ್ ಬಳಕೆಯಾಗಿದೆ. ಇದು ಸುಮಾರು 37,600 ಕೆಜಿ ಸರಕು, ಹಲವಾರು ಜನ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಮಾರ್ಚ್‌ನಲ್ಲಿ ಪಶ್ಚಿಮ ಇರಾಕ್‌ನಲ್ಲಿ ಇರಾನ್ ದಾಳಿಗೆ ಯುಎಸ್ ಮಿಲಿಟರಿ KC -135 ವಿಮಾನ ಪತನಗೊಂಡಿತ್ತು. ಇರಾನ್ ಬೆಂಬಲಿತ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.