ಮರೆಯಾದ ತರಕಾರಿ ಕೃಷಿಯ ಭೀಷ್ಮ ಧರ್ಣಪ್ಪ ಗೌಡ ಕುಂಟ್ಯಾನ- ಕಹಳೆ ನ್ಯೂಸ್
ಪುತ್ತೂರು : ತರಕಾರಿ ಕೃಷಿಯ ಭೀಷ್ಮ ಎಂದೇ ಪ್ರಸಿದ್ದರಾದ ಬನ್ನೂರು ಗ್ರಾಮದ ಕೃಷಿಕ ಧರ್ಣಪ್ಪ ಗೌಡ ಕುಂಟ್ಯಾನರವರು ಚಾರ್ವಾಕ ಗ್ರಾಮದ ಕುಂಟ್ಯಾನ ಫಾರ್ಮ್‍ನಲ್ಲಿ ಮೃತಪಟ್ಟಿದ್ದಾರೆ. ಕಳೆದ 50 ವರ್ಷಗಳಿಂದ ತರಕಾರಿ ಕೃಷಿಯಲ್ಲಿ ಪರಿಣಿತರಾಗಿದ್ದ ಧರ್ಣಪ್ಪ ಗೌಡರು ಚಾರ್ವಾಕ, ಸಂಪ್ಯ, ಮಾಡಾವುಗಳಲ್ಲಿ ಜಾಗವನ್ನು ಖರೀದಿಸಿ ತನ್ನ ಕೃಷಿ ಕ್ಷೇತ್ರದ ಸಾಧನೆಯನ್ನು ವಿಸ್ತರಿಸಿದ್ದರು. ಕೃಷಿ ಕ್ಷೇತ್ರದ ಮಹಾನ್ ಸಾಧಕರಾಗಿದ್ದ ಧರ್ಣಪ್ಪ ಗೌಡರನ್ನು ಹಲವಾರು ಪ್ರಶಸ್ತಿಗಳು ಹರಸಿ ಬಂದಿತ್ತು. ಇವರ ಸಾಧನೆಯನ್ನು ಗುರುತಿಸಿ ಹಲವು...







