Recent Posts

Saturday, May 9, 2026
ಪುತ್ತೂರು

ಪುತ್ತೂರಿನ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳತನ; ಅಪಾರ ಪ್ರಮಾಣದ ಚಿನ್ನಾಭರಣಗಳು ಕಳವು-ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಪ್ರತಿಷ್ಠಿತ ಶ್ರೀಧರ್ ಭಟ್ ಬ್ರದರ್ಸ್ ಅಂಗಡಿಯ ಪಕ್ಕದಲ್ಲಿರುವ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ನಗರ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಯಿಂದ ಕಳ್ಳತನ ನಡೆದ ಸ್ಥಳ ಕೇವಲ 50 ಮೀ ದೂರದಲ್ಲಿದೆ.

ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ರಿಪೇರಿಗೆ ಬಂದ ಚಿನ್ನ ಸಹಿತ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವಾಗಿದೆ ಎನ್ನುವುದು ತಿಳಿದುಬಂದಿದೆ.

ಕಳ್ಳತನ ನಡೆದಿರುವ ಜ್ಯುವೆಲರಿ ಶಾಪ್ ನ ಸಿ.ಸಿ ಟಿವಿ ನಿಷ್ಕ್ರಿಯವಾಗಿದ್ದೂ ಎದುರಿನ ಅಂಗಡಿಗಳ ಸಿ.ಸಿ ಟಿವಿಗಳನ್ನೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಸಿ.ಸಿ ಟಿವಿ ದೃಶ್ಯಾವಳಿ ದೊರೆತ ಬಳಿಕವಷ್ಟೇ ಕೃತ್ಯದ ಸಮಯ ತಿಳಿದು ಬರಲಿದೆ ಎನ್ನಲಾಗಿದೆ.