Wednesday, May 6, 2026

ಪ್ರಾದೇಶಿಕ

ಪುತ್ತೂರು

ಪುತ್ತೂರು : ಬೈಕ್ ಅಪಘಾತ- ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯೋರ್ವ ಮೃತ್ಯು, ಓರ್ವ ಗಂಭೀರ!- ಕಹಳೆ ನ್ಯೂಸ್

ಪುತ್ತೂರು : ಸವಣೂರು ಪುತ್ತೂರು ರಸ್ತೆಯ ಮಾಂತೂರು ಎಂಬಲ್ಲಿ ಬೈಕ್ ಅಪಘಾತಗೊಂಡು ವಿವೇಕಾನಂದ ಕಾಲೇಜು ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ಮಾ.21 ರ ತಡ ರಾತ್ರಿ ನಡೆದಿದ್ದು, ಬೈಕ್‍ನಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾರೆ. ಮಡಿಕೇರಿ ಸೋಮವಾರ ಪೇಟೆ ನಿವಾಸಿ ಬೋಜಪ್ಪ, ಉಮಾವತಿ ದಂಪತಿ ಪುತ್ರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿರುವ ಚೇತನ್ ಮೃತಪಟ್ಟವರು. ಅವರ ಸ್ನೇಹಿತ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ...
ಬೆಳ್ತಂಗಡಿ

ಉಜಿರೆ ಬಸ್‍ನಲ್ಲಿ ಹೃದಯಾಘಾತ ; ಸಿಬ್ಬಂದಿ ಮತ್ತು ಸಹಪ್ರಯಾಣಿಕರ ನಿರ್ಲಕ್ಷ್ಯಕ್ಕೆ ಬಲಿಯಾಯಿತು ವ್ಯಕ್ತಿಯ ಜೀವ-ಕಹಳೆ ನ್ಯೂಸ್

ಬೆಳ್ತಂಗಡಿ : ಬಸ್ಸಿನಲ್ಲೇ ಹೃದಯಾಘಾತವಾಗಿದ್ದರೂ ಬಸ್ಸಿನಿಂದ ಇಳಿಸಿ ಮುಂದೆ ಸಾಗಿದ ಬಸ್‍ನ ಚಾಲಕ ನಿರ್ವಾಹಕ ಮತ್ತು ಸಹಪ್ರಯಾಣಿಕರ ಅಮಾನವೀಯತೆಗೆ ಒಂದು ಜೀವ ಬಲಿಯಾದ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆಯ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಮಗಳನ್ನು ಭೇಟಿಯಾಗಲು ಹರಿಯಾಣದಿಂದ ಉಜಿರೆಗೆ ಆಗಮಿಸಿದ್ದ ವ್ಯಕ್ತಿ ವಾಪಸ್ಸು ತೆರಳಲು ಉಜಿರೆಯಲ್ಲಿ ಬಸ್ಸಿನಲ್ಲಿ ಕೂತ ಸಂದರ್ಭ ಏಕಾಏಕಿ ಕುಸಿದು ಬಿದ್ದಿದ್ದಾರೆ. ಬಸ್ಸಿನಲ್ಲಿದ್ದ ಸಹಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಇವರನ್ನು ಹಾಗೆಯೇ ಬಸ್ಸಿನಿಂದ ಕೆಳಗೆ ಇಳಿಸಿ ಉಜಿರೆಯ ಬಸ್ಟ್ಯಾಂಡಿನಲ್ಲಿ...
ಕುಂದಾಪುರ

ಮೇ.1ರಿಂದ 10ರ ತನಕ ಕುಂದಾಪುರ ಮತ್ತು ಮಂಗಳೂರಿನಲ್ಲಿ ಕ್ರೀಡಾ ಹಬ್ಬ ನಡೆಯಲಿದೆ ; ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ-ಕಹಳೆ ನ್ಯೂಸ್

ಕುಂದಾಪುರ : ಕರ್ನಾಟಕ ಕ್ರೀಡಾ ಇತಿಹಾಸದಲ್ಲೇ ಅಪೂರ್ವವೆನಿಸಿರುವ ಕ್ರೀಡಾ ಹಬ್ಬವೊಂದನ್ನು ಆಯೋಜಿಸಲು ರಾಜ್ಯದ ಅತ್ಯಂತ ಜನಪ್ರಿಯ ಸ್ಪೋಟ್ರ್ಸ್ ಕ್ಲಬ್‍ಗಳಲ್ಲಿ ಒಂದಾಗಿರುವ ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ನೇತೃತ್ವದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 10 ದಿನಗಳ ಕಾಲ ಹೊನಲು ಬೆಳಕಿನ ಕ್ರೀಡಾ ಹಬ್ಬವನ್ನು ಆಯೋಜಿಸಿದೆ. ಇದೇ ಮೇ.1ರಿಂದ 10ರ ತನಕ ಕುಂದಾಪುರ ಮತ್ತು ಮಂಗಳೂರಿನಲ್ಲಿ ಕ್ರೀಡಾ ಹಬ್ಬ ನಡೆಯಲಿದೆ ಎಂದು ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ತಿಳಿಸಿದ್ದಾರೆ....
ಬೆಳ್ತಂಗಡಿ

ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ರಸ್ತೆ ದುರಸ್ತಿ; ಮಚ್ಚಿನ ಗ್ರಾ.ಪಂ. ರಸ್ತೆಗೆ ನಾಣ್ಯಪ್ಪ ಗೌಡರ ಕರಸೇವೆ-ಕಹಳೆ ನ್ಯೂಸ್

ಬೆಳ್ತಂಗಡಿ : ಹತ್ತಾರು ಮಂದಿ ನಿತ್ಯ ಅವಲಂಬಿಸುವ ಗ್ರಾಮ ಪಂಚಾಯತ್ ರಸ್ತೆಯನ್ನು 74ರ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ಹಾರೆ, ಪಿಕ್ಕಾಸು ಹಿಡಿದು ಮೂರು ತಿಂಗಳುಗಳ ಅವಧಿಯಲ್ಲಿ ರಸ್ತೆ ದುರಸ್ತಿ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕೋಡಿ ನಾಣ್ಯಪ್ಪ ಗೌಡರು. ಮಚ್ಚಿನ ಗ್ರಾಮದ ನೇರೊಳ್‍ಪಲ್ಕೆ ಕುಕ್ಕಿಲ, ಮಾಯಿಲೋಡಿಗೆ ಸಾಗುವ ಮಣ್ಣಿನ ರಸ್ತೆ ತೀರಾ ಹದಗೆಟ್ಟಿದ್ದು, ನಾಣ್ಯಪ್ಪ ಗೌಡರು 74ರ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ರಸ್ತೆಗೆ ವಾಲಿಕೊಂಡಿದ್ದ ಬಿದಿರು ಮೆಳೆಗಳನ್ನು ಸವರಿಸಿದ್ದಾರೆ....
ಪುತ್ತೂರು

ತೆಲಂಗಾಣದಲ್ಲಿ ಮಾರ್ಚ್ 22 ರಿಂದ 25ರ ತನಕ ನಡೆಯಲಿರುವ 47 ನೇ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಆಟವಾಡಲು ಬಲ್ನಾಡ್ ನ ವಿನುಶ್ರೀ ಆಯ್ಕೆ-ಕಹಳೆ ನ್ಯೂಸ್

ಪುತ್ತೂರು : ತೆಲಂಗಾಣದಲ್ಲಿ ಮಾರ್ಚ್ 22 ರಿಂದ 25ರ ತನಕ ನಡೆಯಲಿರುವ 47 ನೇ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಕ್ಕೆ ಕರ್ನಾಟಕದ ತಂಡದಲ್ಲಿ ಆಟವಾಡಲು ಬಲ್ನಾಡ್ ನ ವಿನುಶ್ರೀ ಆಯ್ಕೆಯಾಗಿದ್ದಾರೆ. ಇವರು ಬಲ್ನಾಡು ಗ್ರಾಮದ ಪುತ್ತೂರು ತಾಲೂಕಿನ ದಿ ||ವೀರಪ್ಪ ಗೌಡ ಮತ್ತು ಸುಶೀಲ ಇವರ ಪುತ್ರಿಯಾಗಿದ್ದು, ಈಕೆ ಮೂಡಬಿದ್ರೆ ಆಳ್ವಾಸ್ ವಿದ್ಯಾ ಸಂಸ್ಥೆ ಯಲ್ಲಿ ದ್ವಿತಿಯ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ....
ಕಡಬ

ಕಡಬ : ಮಧ್ಯರಾತ್ರಿ ಮನೆಗೆ ನುಗ್ಗಿ ಅರಣ್ಯಾಧಿಕಾರಿಗಳಿಂದ ದೌರ್ಜನ್ಯ ಆರೋಪ – ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶ | ಕಳೆದ 6 ದಿನಗಳಿಂದ ನಡೆಯುತ್ತಿದ್ದ ಉಪವಾಸ ಅಂತ್ಯ-ಕಹಳೆ ನ್ಯೂಸ್

ಕಡಬ : ರಾತ್ರೋ ರಾತ್ರಿ ಮನೆಗೆ ನುಗ್ಗಿ ತನಿಖೆಯ ಸೋಗಿನಲ್ಲಿ ದೌರ್ಜನ್ಯ ಎಸಗಿದ್ದಾರೆ , ಅವರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕಡಬದ ಐತೂರು ನಿವಾಸಿ ಪದ್ಮಯ್ಯ ಗೌಡರ ಕುಟುಂಬ ಸದಸ್ಯರು ಹಾಗೂ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್.ಟಿ. ಅವರು ಮಾ.15ರಿಂದ ಕಡಬ ತಹಸೀಲ್ದಾರ್ ಕಛೇರಿಯ ಸಮೀಪ ನಡೆಸುತ್ತಿದ್ದ ಉಪಾವಸ ಸತ್ಯಾಗ್ರಹ 6 ನೇ ತಾರ್ಕಿಕ ಅಂತ್ಯ ಕಂಡಿದೆ. ದೌರ್ಜನ್ಯ ಎಸಗಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರ...
ಪುತ್ತೂರು

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಕ- ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ-ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 2020-21ನೇ ಸಾಲಿನ ಶಿಕ್ಷಕ- ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಕಬಕದ ಡಾ. ಶಶಿಧರ ಕಜೆ ಆಯ್ಕೆಯಾಗಿದ್ದಾರೆ. ರಕ್ಷಕ-ಶಿಕ್ಷಕ ಸಂಘದ ರಚನೆ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಿತು. ಸಂಘ ಸಭೆಯಲ್ಲಿ ಆಯ್ಕೆ ಪ್ರಕಿಯೆ ನೆರವೇರಿತು. ಉಪಾಧ್ಯಕ್ಷರಾಗಿ ನೆಹರೂನಗರದ ಶಶಿಕಲಾ ದೇವಿ ಮತ್ತು ಉಪ್ಪಿನಂಗಡಿ ರಥಬೀದಿಯ ದಿನೇಶ್ ಶೆಣೈ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮತ್ತು ಜೊತೆ...
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಐಬಿಪಿಸ್ ಪರೀಕ್ಷೆಗಳ ತರಬೇತಿಗೆ ಚಾಲನೆ, ಪೂರ್ವತಯಾರಿಯೇ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಮೂಲ ಮಂತ್ರ ; ಗಣೇಶ್ ಹೆಬ್ಬಾರ್-ಕಹಳೆ ನ್ಯೂಸ್

ಪುತ್ತೂರು : ಕ್ರಮಬದ್ಧ ಪೂರ್ವತಯಾರಿಯೇ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಮೂಲ ಮಂತ್ರ. ನಾವು ಕೈಗೊಳ್ಳುವ ಎಲ್ಲಾರೀತಿಯ ಕೆಲಸಗಳಲ್ಲಿ ಶಿಸ್ತು, ಬದ್ಧತೆ, ಆತ್ಮವಿಶ್ವಾಸ, ತಾಳ್ಮೆ, ಧನಾತ್ಮಕ ಚಿಂತನೆ ಮೊದಲಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಟೈಮ್, ಮಂಗಳೂರು ಇದರ ನಿರ್ದೇಶಕ ಗಣೇಶ್ ಹೆಬ್ಬಾರ್ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಹಾಗೂ ತರಬೇತಿ ಮತ್ತು ನೇಮಕಾತಿ ಘಟಕವು ಟೈಮ್, ಮಂಗಳೂರು ಇದರ ಸಹಯೋಗದಲ್ಲಿ ಕಾಲೇಜಿನ ಅಂತಿಮ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ...
1 776 777 778 779 780 874
Page 778 of 874