Recent Posts

Saturday, May 9, 2026

ಪ್ರಾದೇಶಿಕ

ಕಡಬ

ಕೊಣಾಜೆ ಎಂಬಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ-ಕಹಳೆ ನ್ಯೂಸ್

ಕಡಬ : ಕೊಣಾಜೆ ಎಂಬಲ್ಲಿ ಶನಿವಾರ ರಾತ್ರಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಣಾಜೆ ಗ್ರಾಮದ ದೊಡ್ಡಮನೆ ನಿವಾಸಿ ಗಂಗಾಧರ ಗೌಡ ಎಂಬವರ ಪುತ್ರ ಕಿರಣ್ ಎಂದು ಗುರುತಿಸಲಾಗಿದ್ದು, ಈ ಕಡಬದ ಬೈಕ್ ಶೋರೂಂ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಇತ್ತೀಚಿಗೆ ವೈಯಕ್ತಿಕ ಕಾರಣಕ್ಕಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಬಚಾವಾಗಿದ್ದ. ಈತ ಮನೆ ಸಮೀಪ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಆಸ್ವತ್ರೆಗೆ...
ಪುತ್ತೂರು

ಓಪನ್ ರಾಪಿಡ್ ಚೆಸ್ ಪಂದ್ಯಾಟ ; ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಾತ್ವಿಕ್ ಶಿವಾನಂದ ಗೆ ದಕ್ಷಿಣಕನ್ನಡ ಜಿಲ್ಲಾ ಬೆಸ್ಟ್ ಪ್ಲೇಯರ್ ಅವಾರ್ಡ್-ಕಹಳೆ ನ್ಯೂಸ್

ಪುತ್ತೂರು : ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ಲಿಮಿಟೆಡ್(KIOCL) ಮಂಗಳೂರಿನ ಕಾವೂರುನಲ್ಲಿ ನಡೆಸಿದ ಮೂರನೇ ಕುದುರೆಮುಖ ಟ್ರೋಫಿ ಅಂತರ್ ಜಿಲ್ಲಾ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಸಾತ್ವಿಕ್ ಶಿವಾನಂದ ಪಿ.ಎಸ್ ದಕ್ಷಿಣಕನ್ನಡ ಜಿಲ್ಲಾ ಬೆಸ್ಟ್ ಪ್ಲೇಯರ್ ಅವಾರ್ಡ್ ನ್ನು ಪಡೆದುಕೊಂಡಿರುತ್ತಾನೆ. ಈತನು ಸುಳ್ಯ ತಾಲೂಕಿನ ಬೆಳ್ಳಾರೆಯ ಶ್ರೀರಾಮ ಪಿ.ಸಿ ಮತ್ತು ಶಿಲ್ಪರವರ ಪುತ್ರ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್,...
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೋವಿಡ್-19 ಜನಜಾಗೃತಿ ಅಭಿಯಾನ-ಕಹಳೆ ನ್ಯೂಸ್

ಪುತ್ತೂರು : ಕೋವಿಡ್-19 ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ ಎಲ್ಲ ವರ್ಗದ ಜನರಿಗೆ ಆತಂಕ ಸೃಷ್ಟಿಸಿದೆ. ಈ ಆರೋಗ್ಯ ವಿಕೋಪದ ನಿಯಂತ್ರಣಕ್ಕೆ ಸರ್ಕಾರವು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಸ್ತುತ ಇದರ ಎರಡನೆಯ ಅಲೆಯು ನಮ್ಮನ್ನು ಆವರಿಸಿದಂತೆ ಭಾಸವಾಗುತ್ತಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಸಂತ ಫಿಲೋಮಿನಾ ಕಾಲೇಜಿನ ಯೂತ್‍ರೆಡ್‍ಕ್ರಾಸ್, 3/19 ಕರ್ನಾಟಕ ಬಿನ್ ಎನ್‍ಸಿಸಿ,...
ಪುತ್ತೂರು

ಅಂಬಿಕಾ ಕಾಲೇಜಿನ ಪ್ರಾಚಾರ್ಯರಿಂದ ವಿನೂತನ ಪ್ರಯತ್ನ ; ಪ್ರತಿದಿನ ಭಾರತೀಯ ದಿನದರ್ಶಿಕಾ ರೂಪಿಸಿ ಹಂಚುತ್ತಿರುವ ಡಾ.ವಿನಾಯಕ ಭಟ್-ಕಹಳೆ ನ್ಯೂಸ್

ಪುತ್ತೂರು : ಪಾಶ್ಚಿಮಾತ್ಯ ಸಂಸ್ಕøತಿಯ ದಾಳಿಗೆ ಸಿಲುಕಿ ದೇಸೀಯ ಕಲ್ಪನೆಗಳು ಮರೆಯಾಗುತ್ತಿರುವ ಬಗೆಗೆ ಸಾಕಷ್ಟು ಮಂದಿ ಕಳವಳ ವ್ಯಕ್ತಪಡಿಸುತ್ತಾರೆ. ಅಲ್ಲಿಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಕೆಲವರು ಮಾಡುವುದೂ ಇದೆ. ಆದರೆ ದೇಸೀಯವಾದ ವಿಚಾರವೊಂದಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಒಪ್ಪಿಸಿಕೊಂಡು, ಆತ್ಮನಿರ್ಭರ ಭಾರತದ ಕನಸಿಗನುಗುಣವಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಪುತ್ತೂರಿನ ಡಾ.ವಿನಾಯಕ ಭಟ್ಟ ಗಾಳಿಮನೆ ಕೂಡ ಒಬ್ಬರು. ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ...
ಮಂಜೇಶ್ವರ

ಮಾರ್ಚ್ 26 ರಂದು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕ್ವಿಂಟಾಲ್ ಗಾಂಜಾ ವಶ ; ಮೂವರು ಆರೋಪಿಗಳು ಪರಾರಿ-ಕಹಳೆ ನ್ಯೂಸ್

ಮಂಜೇಶ್ವರ : ಮಾರ್ಚ್ 26 ರಂದು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕ್ವಿಂಟಾಲ್ ಗಾಂಜಾ ಮತ್ತು 50 ಗ್ರಾಂ ಮಾದಕ ವಸ್ತುವನ್ನು ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು , ಮೂವರು ಪರಾರಿಯಾಗಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಮಜೀರ್ ಪಳ್ಳ ಕೊಳ್ಯೂರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಓರ್ವನನ್ನು ಬೆನ್ನಟ್ಟಿ ಹಿಡಿದರೂ ಇತರ ಮೂವರು ಪರಾರಿಯಾದರು. ಕಾರನ್ನು ತಪಾಸಣೆ ನಡೆಸಿದಾಗ ಗಾಂಜಾ ಮತ್ತು ಎಂ...
ಪುತ್ತೂರು

ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಅಂಬಿಕಾ ಪಿಯು ಅತ್ಯುತ್ತಮ ಸಾಧನೆ-ಕಹಳೆ ನ್ಯೂಸ್

ಪುತ್ತೂರು : ಪ್ರತಿಷ್ಟಿತ ಐಐಟಿ ಹಾಗೂ ಎನ್‍ಐಟಿಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ ಜೆಇಇ ಮೈನ್ 20-21 ಪರೀಕ್ಷೆಯಲ್ಲಿ ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರಿದ್ದಾರೆ. ವಿದ್ಯಾರ್ಥಿಗಳಾದ ಅಚಿಂತ್ಯಕೃಷ್ಣ ಬಿ (96.29), ಮೊಹಮ್ಮದ್ ಆಶಿಕ್ ಎಸ್ (93.22), ರಕ್ಷಿತಾ ಆರ್ (92.09), ಆಕಾಶ್ ಕೆ.ಪಿ (91.99), ಶ್ರೇಯಸ್ ಹೇರಳೆ (87.96), ಧನುಷ್ ರಾಜನ್ (86.84), ಪುನೀತ್ ಕುಮಾರ್ (85.41), ಅಜಯ್ ಎಚ್.ಆರ್...
ಪುತ್ತೂರು

ಮಾರ್ಚ್ 28 ರಂದು ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು , ಪುತ್ತೂರು ಇದರ 6ನೇ ವರ್ಷದ ವಾರ್ಷಿಕೋತ್ಸವ ಮತ್ತು ಯೋಗ ಶಿಬಿರದ ಸಮಾರೋಪ ಸಮಾರಂಭ-ಕಹಳೆ ನ್ಯೂಸ್

ಪುತ್ತೂರು : ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು ಉಜಿರು ಪಾದೆ, ಪುತ್ತೂರು ಇದರ 6ನೇ ವರ್ಷದ ವಾರ್ಷಿಕೋತ್ಸವ ಮತ್ತು ಯೋಗ ಶಿಬಿರದ ಸಮಾರೋಪ ಸಮಾರಂಭ ಮಾರ್ಚ್ 28 ರಂದು ಬೆಳಿಗ್ಗೆ 9 ಗಂಟೆಗೆ ವಿನಾಯಕ ಕ್ರೀಡಾಂಗಣ, ಬಲ್ನಾಡು, ಉಜಿರುಪಾದೆ ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ರವಿ ನೆಲ್ಲಿತ್ತಾಯ, ಅರ್ಚಕರು, ದಂಡನಾಯಕ ಶ್ರೀ ಉಳ್ಳಾಲ್ತಿ ದೈವಸ್ಥಾನ, ಬಲ್ನಾಡು, ಶ್ರೀ ಮಾಧವ ಗೌಡ ಕಾಂತಿಲ, ಅಧ್ಯಕ್ಷರು, ವ್ಯವಸ್ಥಾಪನಾ...
ಮಂಜೇಶ್ವರ

ಬಿಜೆಪಿ ಮಂಜೇಶ್ವರ ಕಛೇರಿಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಚುನಾವಣೆ ತಯಾರಿ ಬಗ್ಗೆ ಕಾರ್ಯಕರ್ತರ ಸಭೆ-ಕಹಳೆ ನ್ಯೂಸ್

ಮಂಜೇಶ್ವರ : ಬಿಜೆಪಿ ಮಂಜೇಶ್ವರ ಕಛೇರಿಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಚುನಾವಣೆ ತಯಾರಿ ಬಗ್ಗೆ ಕಾರ್ಯಕರ್ತರ ಸಭೆ ನಡೆಸಿದರು. ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಶಾಸಕರಾದ ಸುನೀಲ್ ಕುಮಾರ್, ರಾಜೇಶ್ ನಾಯ್ಕ್, ಪ್ರಮುಖರಾದ ಸಂತೋಷ್ ರೈ, ಸುರೇಶ್ ಶೆಟ್ಟಿ, ಮಣಿಕಂಠ ರೈ, ಉಪಸ್ಥಿತರಿದ್ದರು....
1 773 774 775 776 777 874
Page 775 of 874