Recent Posts

Saturday, May 9, 2026

ಪ್ರಾದೇಶಿಕ

ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಶೈಕ್ಷಣಿಕ ಕಾರ್ಯಗಾರ, ಗುರಿ ಮತ್ತು ಧ್ಯೇಯೊದ್ದೇಶವನ್ನು ಸಾಧಿಸುವುದೇ ಜೀವನದ ಸಾರ್ಥಕತೆಯಾಗಿದೆ ; ಕಶೆಕೋಡಿ ಸೂರ್ಯನಾರಾಯಣ ಭಟ್-ಕಹಳೆ ನ್ಯೂಸ್

ಪುತ್ತೂರು : ಆಸೆ ಯಾವತ್ತಿಗೂ ಸ್ವತಂತ್ರವಾಗಿರಬೇಕೆ ಹೊರತು ಸಂಕೋಲೆಗಳಿಂದ ಬಂಧಿಯಾಗಿರಬಾರದು, ನಾವು ಆಸೆಗಳನ್ನು ಎಷ್ಟು ಬಂಧಿಸಲು ಪ್ರಯತ್ನಿಸುತ್ತೇವೆಯೋ ಅಷ್ಟು ನಮಗೆ ಅಪಾಯಕಾರಿ. ಮನುಷ್ಯನಿಗೆ ಜೀವನದಲ್ಲಿ ಆಸೆಗಳಿಲ್ಲದೆ ಬದುಕುವುದು ಕಷ್ಟ ಆದರೆ ಆಸೆ ಅತಿಯಾಗಬಾರದು ಎಂದು ರಾಜ್ಯ ಧಾರ್ಮಿಕ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು. ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಕಲಾ ವಿಭಾಗದ ಜಂಟಿ ಆಶ್ರಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ನಡೆದ ವ್ಯಕ್ತಿತ್ವ ವಿಕಸನ ಮತ್ತು ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ...
ಪುತ್ತೂರು

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಇಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಮತ್ತು ರಾಮೋತ್ಸವ ಸಮಿತಿ ಪುತ್ತೂರು ವತಿಯಿಂದ ನಡೆಯಲಿರುವ ಶ್ರೀ ರಾಮೋತ್ಸವ 2021 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಇಂದು ಬೆಳಿಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಮತ್ತು ರಾಮೋತ್ಸವ ಸಮಿತಿ ಪುತ್ತೂರು ವತಿಯಿಂದ ನಡೆಯಲಿರುವ ಶ್ರೀ ರಾಮೋತ್ಸವ 2021 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಮುರಳಿ ಕೃಷ್ಣ ಹಸಂತಡ್ಕ ಬಜರಂಗದಳದ ಪ್ರಾಂತ ಸಹ ಸಂಚಾಲಕರು, ಬಾಮಿ ಅಶೋಕ್ ಶೆಣೈ, ಕೃಷ್ಣ ಪ್ರಸನ್ನ ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷದ್, ಹರೀಶ್ ಕುಮಾರ್ ದೋಳ್ಪಾಡಿ ಪ್ರಖಂಡ ಸಂಯೋಜಕರು,...
ಬಂಟ್ವಾಳ

ಕಾಸರಗೋಡಿನ ಮಾಜಿ ಸಂಸದರು ದಿ. ಐ.ರಾಮ ರೈಯವರ ಇಚ್ಲಂಪ್ಪಾಡಿಯ ಮನೆಗೆ ಭೇಟಿ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್-ಕಹಳೆ ನ್ಯೂಸ್

ಬಂಟ್ವಾಳ : ಕಾಸರಗೋಡಿನ ಮಾಜಿ ಸಂಸದರು ದಿ. ಐ.ರಾಮ ರೈಯವರ ಇಚ್ಲಂಪ್ಪಾಡಿಯ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಮತ್ತು ದಿ.ರಾಮ ರೈಯವರ ಧರ್ಮಪತ್ನಿ ಉಮಾವತಿ ರೈಯವರ ಆಶೀರ್ವಾದ ಪಡೆದು ಮಂಜೇಶ್ವರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಬೆಂಬಲಿಸುವಂತೆ ಮನವಿ ಮಾಡಿದರು....
ಪುತ್ತೂರು

ಪುತ್ತೂರು ಅಪಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ; ಆರೋಪಿ ವಿರುದ್ಧ ಪೊಕ್ಸೋ ಪ್ರಕರಣ ದಾಖಲು-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ತಾಲೂಕಿನ ಕಬಕ ಎಂಬಲ್ಲಿ ಮಾರ್ಚ್ 28 ರಂದು ವಿಟ್ಲ ಮದುವೆ ಕಾರ್ಯಕ್ರಮಕ್ಕೆ ಬಂದ ಅಪಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವೊಂದು ಭಾನುವಾರ ನಡೆದಿದೆ. ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಕಬಕ ಮೂಲದ ಹಮೀದ್ ಯಾನೆ ಮೌಲ ಅಮ್ಮಿ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ವಿಟ್ಲ-ಪುತ್ತೂರು ರಸ್ತೆಯ ಕಬಕ ಸಮೀಪದ ಮನೆಯೊಂದರಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಪುತ್ತೂರು ಮೂಲದ...
ಮೂಡಬಿದಿರೆ

ಮೂಡುಬಿದಿರೆ ಭಜರಂಗದಳದ ಬೃಹತ್ ಕಾರ್ಯಾಚರಣೆ ; ಹಿಂದೂ ಯುವತಿ ಮುಸ್ಲಿಂ ಯುವಕ ಪೊಲೀಸ್ ವಶ–ಕಹಳೆ ನ್ಯೂಸ್

ಮೂಡುಬಿದಿರೆ : ಮೂಡುಬಿದಿರೆ ಇಲ್ಲಿನ ಭಜರಂಗದಳ ಖಚಿತ ಮಾಹಿತಿಯ ಮೇರೆಗೆ ಗುರುಪುರ ಕೈಕಂಬದಲ್ಲಿ ಮುಂಬೈಗೆ ಹೊರಟ ರೇಶ್ಮಾ ಬಸ್ಸನ್ನು ತಡೆದಿದೆ. ಮಂಗಳೂರು ಭಜರಂಗದಳ ಕಾರ್ಯಕರ್ತರು ಖಚಿತ ಮಾಹಿತಿಯನ್ನು ಮೂಡುಬಿದಿರೆ ಭಜರಂಗದಳ ಕಾರ್ಯಕರ್ತರಿಗೆ ರವಾನಿಸಿದ್ದು ಈ ಮಾಹಿತಿಯ ಮೇರೆಗೆ ಬಸ್ ತಡೆದಿದ್ದಾರೆ. ಈ ಸಂದರ್ಭದಲ್ಲಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಪರಾರಿಯಾಗಲು ತಯಾರಾಗಿ ಬಂದಿದ್ದರು ಎನ್ನಲಾಗಿದೆ. ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರೂ ಮುಂಬೈಗೆ ಪರಾರಿಯಾಗಲು...
ಪುತ್ತೂರು

ಕಾವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲು ಸುಲಭದ ದಾರಿ; ಮುಳಿಯ ಕುಟಂಬದಿಂದ 108 ಮೆಟ್ಟಿಲ ಸೋಪಾನ ಮಾಲೆ ಸಮರ್ಪಣೆ-ಕಹಳೆ ನ್ಯೂಸ್

ಪುನರ್ ನವೀಕರಣಗೊಂಡ ಕಟ್ಟೆಯಲ್ಲಿ ಶ್ರೀ ದೇವರಿಂದ ಕಟ್ಟೆ ಪೂಜೆ ಸ್ವೀಕಾರ : ಪುತ್ತೂರು : ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಹೋಗಲು ಭಕ್ತರಿಗೆ ಸುಲಭದ ದಾರಿಯಾಗಿ ಮುಳಿಯ ಕುಟಂಬದಿಂದ ಕಾವಿನಲ್ಲಿರುವ ಮುಳಿಯ ಪಂಚಸಿರಿ ಬಡಾವಣೆಯಿಂದ 108 ಮೆಟ್ಟಿಲ ಸೋಪಾನ ಮಾಲೆಯನ್ನು ಮಾ.26ರಂದು ಸಂಜೆ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅನಾದಿ ಕಾಲದ ಇತಿಹಾಸವಿದ್ದ ನವಿಕರಣಗೊಂಡ ಕಟ್ಟೆಯಲ್ಲಿ ಶ್ರೀ ದೇವರು ಕಟ್ಟೆ ಪೂಜೆ ಸ್ವೀಕರಿಸಿದರು. ದೇವರ ಸೇವೆ ಮಾಡುವುದು ಪುಣ್ಯದ...
ಬಂಟ್ವಾಳ

ಕಕ್ಯಪದವುನಲ್ಲಿ ನಡೆದ ಕಂಬಳದಲ್ಲಿ ಮತ್ತೆ ದಾಖಲೆ ಬರೆದ ಮಿಜಾರು ಶ್ರೀನಿವಾಸಗೌಡ-ಕಹಳೆ ನ್ಯೂಸ್

ಬಂಟ್ವಾಳ : ಭಾನುವಾರ ಕಕ್ಯಪದವುನಲ್ಲಿ ನಡೆದ ಕಂಬಳದಲ್ಲಿ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವಥಪುರ ಮಿಜಾರು ಅವರು ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ಕಳೆದ ವಾರ ವೇಣೂರಿನಲ್ಲಿ ನಡೆದ ಕಂಬಳದಲ್ಲಿ 8.89 ಸೆಕೆಂಡ್ ಗಳಲ್ಲಿ 100 ಮೀಟರ್ ಕ್ರಮಿಸಿ ಅವರು ದಾಖಲೆ ಬರೆದಿದ್ದರು. ಮತ್ತು ಕಕ್ಯಪದವು ಮೈರಾ ಸತ್ಯ - ಧರ್ಮ ಜೋಡುಕರೆ ಬಯಲು ಕಂಬಳದಲ್ಲಿ ತಮ್ಮ ದಾಖಲೆಯನ್ನು ಭಾನುವಾರ...
ಬೆಳ್ತಂಗಡಿ

ಪಡಂಗಡಿ ಗ್ರಾಮ ಪಂಚಾಯತ್ ಬಳಿಯ ರಸ್ತೆಯಲ್ಲಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು-ಕಹಳೆ ನ್ಯೂಸ್

ಬೆಳ್ತಂಗಡಿ : ಪಡಂಗಡಿ ಗ್ರಾಮ ಪಂಚಾಯತ್ ಬಳಿಯ ರಸ್ತೆಯಲ್ಲಿ ಶನಿವಾರ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಮ್ಯಕ್ತಿಯನ್ನು ಪೊಯ್ಯೆಗುಡ್ಡೆ ನಿವಾಸಿ ಬೈಕ್ ಸವಾರ 34ವರ್ಷದ ಜಾಬಿರ್ ಎಂದು ಗುರುತಿಸಲಾಗಿದೆ. ಧರ್ಮಸ್ಥಳದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಸರಕಾರಿ ಬಸ್ಸು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ....
1 772 773 774 775 776 874
Page 774 of 874