ಕಟಪಾಡಿ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ಭಕ್ತ ಸಾಗರ ಸಾಕ್ಷಾತ್ ಅನುಭವಿಸಿದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ -ಕಹಳೆ ನ್ಯೂಸ್
ಉಡುಪಿ : ವಿಜಯದ ಧನ್ಯತೆ ಪುರುಷೋತ್ತಮನ ಸಾಧನೆ ಮತ್ತು ಮಾರ್ಗದರ್ಶನ ಸತ್ಯದಿಂದಲೇ ರಾಜನಾಗುವ ಧೇಯ ಎಲ್ಲರೂ ಸೇರಿ ಪ್ರೀತಿಯಿಂದ ಸಮಾಧಾನದಿಂದ ಬದುಕಬೇಕೆಂಬ ಕೃಷ್ಣನ ಮೋಹನ ಗುಣ ಇವೆಲ್ಲದರ ಪ್ರತ್ಯಕ್ಷ ಸಾಕ್ಷಿಯೇ ಕಟಪಾಡಿ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ಭಕ್ತ ಸಾಗರ ಸಾಕ್ಷಾತ್ ಅನುಭವಿಸಿದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ತ್ರೇತಾ ಯುಗದಲ್ಲಿ ಶ್ರೀರಾಮನು ವೇದವಲ್ಲಿಗೆ ನೀಡಿದ ವಚನದಂತೆ ದ್ವಾಪರದಲ್ಲಿ ಯಶೋದ ಮಾತೆಯ ಇಚ್ಛೆಯಂತೆ ಕಲಿಯುಗದಲ್ಲಿ ಭೂಮಿಯ ಮೇಲೆ ಸಂಸಾರದ ಸಾರ್ಥಕ್ಯದ ಸಮಾಧಾನದ ಬದುಕು...







