Tuesday, June 16, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ವೇದ ಶಿಬಿರಗಳಿಂದ ಭಾರತೀಯ ಸಂಸ್ಕೃತಿಯ ಸಂರಕ್ಷಣೆ ಯಾಗುತ್ತದೆ : ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ -ಕಹಳೆ ನ್ಯೂಸ್

ಪುತ್ತೂರು :ವೇದಮಂತ್ರಗಳು, ಯೋಗ ಇತ್ಯಾದಿಗಳು ನಮ್ಮ ಪೂರ್ವಜರು ನಮಗೆ ಕೊಟ್ಟ ಆಸ್ತಿಗಳಾಗಿವೆ. ಇವುಗಳ ಸತ್ಪರಿಣಾಮವು ವೈಜ್ಞಾನಿಕವಾಗಿ ಧೃಢಪಟ್ಟಿದೆ. ಭಾರತೀಯ ಸಂಸ್ಕೃತಿಯ ಆಚಾರ-ವಿಚಾರಗಳನ್ನು ಪಾಲಿಸಿ ಉತ್ತಮ ಆರೋಗ್ಯಕ್ಕಾಗಿ ಯೋಗದ ಅಭ್ಯಾಸಗಳನ್ನು ರೂಢಿಸಿಕೊಂಡು ನಮ್ಮ ಸಂಸ್ಕೃತಿಯನ್ನು ನಾವು ಸಂರಕ್ಷಿಸಬೇಕು. ಜೊತೆಗೆ ಸದಭಿರುಚಿಯ ಹವ್ಯಾಸಗಳನ್ನೂ ನಮ್ಮ ಜೀವನದಲ್ಲಿ ರೂಢಿಸಿಕೊಳ್ಳುವುದು ಅತ್ಯವಶ್ಯ. ದ್ವಾರಕಾ ಪ್ರತಿಷ್ಠಾನದಂತಹಾ ಸಂಸ್ಥೆಗಳು ವೇದ ಶಿಬಿರಗಳನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿವೆ. ಇಂತಹಾ ವೇದ ಶಿಬಿರಗಳಿಂದ ಭಾರತೀಯ ಸಂಸ್ಕೃತಿಯ ಸಂರಕ್ಷಣೆಯಾಗಲಿ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ತಿಳಿಸಿದರು.

ಜಾಹೀರಾತು

ಇವರು ಪುತ್ತೂರಿನ ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ದ್ವಾರಕಾ ಪ್ರತಿಷ್ಠಾನ(ರಿ.) ಪುತ್ತೂರು ಇದರ ಆಶ್ರಯದಲ್ಲಿ, ಕೃಷ್ಣಭಟ್ಟ ಪ್ರತಿಷ್ಠಾನ(ರಿ.) ಚೂಂತಾರು ಇದರ ಸಹಯೋಗದಲ್ಲಿ ನಡೆದ ಐದನೇ ವರ್ಷದ ಉಚಿತ ವಸಂತ ವೇದಪಾಠ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಪ್ರಾಂಶುಪಾಲ ಹಾಗೂ ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಕುಂಬ್ಳೆ ಉಪನಯನವು ಜೀವನದಲ್ಲಿರಬೇಕಾದ ಸಂಸ್ಕಾರ ಹಾಗೂ ಕಲಿಯಬೇಕಾದ ವಿಚಾರಗಳ ಬಗ್ಗೆ ನಮ್ಮನ್ನು ಜಾಗೃತರನ್ನಾಗಿಸುತ್ತದೆ. ವೇದ ಶಿಬಿರಗಳ ಮೂಲಕ ಕಲಿತವರ ನಡತೆಗಳು ತಿದ್ದಿ ತೀಡಿದ ರೂಪದಲ್ಲಿರುತ್ತದೆ. ಹಿರಿಯರಿಂದ ಕಿರಿಯರು ಹೇಗೆ ಕಲಿಯಬೇಕು, ಎಲ್ಲರೂ ಒಗ್ಗೂಡಿ ಹೇಗೆ ಕೆಲಸ ನಿರ್ವಹಿಸಬೇಕು ಹಾಗೂ ಒಗ್ಗಟ್ಟಿನಿಂದ ಬದುಕಬೇಕು ಎಂಬುದನ್ನು ಶಿಬಿರಗಳು ತಿಳಿಸಿಕೊಡುತ್ತದೆ. ನಮ್ಮ ಸಮಾಜ ಸುಸಂಸ್ಕೃತ ಹಾಗೂ ಸುಸಂಘಟಿತವಾಗಿರಬೇಕು. ಹಾಗೆ ಸಮೂಹದಲ್ಲಿ ಬದುಕಲು ಅಗತ್ಯವಾದ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಇಂತಹಾ ಶಿಬಿರಗಳು ನೆರವಾಗುತ್ತವೆ ಎಂದರು.

ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ಅವರು ಅಧ್ಯಕ್ಷೀಯ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕೃಷ್ಣ ಭಟ್ಟ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ವೇದಪಾಠ ಶಿಬಿರದ ಮುಖ್ಯ ಪ್ರಾಚಾರ್ಯ ವೇ.ಮೂ ಶಿವಪ್ರಸಾದ್ ಭಟ್ ಚೂಂತಾರು ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ವೇದಪಾಠ ಶಿಬಿರದ ವೇದಾಧ್ಯಾಪಕ ಶ್ರೀ ವೇ.ಮೂ ದುರ್ಗಾಭಿರಾಮ ಭಟ್ಟ ಉಪಸ್ಥಿತರಿದ್ದರು.

ದ್ವಾರಕಾ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಅಮೃತ ಕೃಷ್ಣ.ಎನ್ ಸ್ವಾಗತಿಸಿ ಧನ್ಯಶ್ರೀ ಮಿಂಚಿನಡ್ಕ ವಂದಿಸಿದರು. ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದ ಅಧ್ಯಾಪಕ ನವೀನಕೃಷ್ಣ ಎಸ್. ಉಪ್ಪಿನಂಗಡಿ ನಿರೂಪಿಸಿದರು.

ಈ ಸಂದರ್ಭದಲ್ಲಿ ವಸಂತ ವೇದಪಾಠ ಶಿಬಿರದ ಮುಖ್ಯ ಪ್ರಾಚಾರ್ಯ ವೇ.ಮೂ ಶಿವಪ್ರಸಾದ್ ಭಟ್ ಚೂಂತಾರು ಅವರ ನೇತೃತ್ವದಲ್ಲಿ ಗುರುವೃಂದದಲ್ಲಿರುವ ವೇ.ಮೂ ದುರ್ಗಾಭಿರಾಮ ಭಟ್ಟ, ನವೀನಕೃಷ್ಣ ಎಸ್. ಉಪ್ಪಿನಂಗಡಿ, ಹಾಗೂ ಆದಿತ್ಯ ಕೃಷ್ಣ ದ್ವಾರಕಾ ಅವರ ಉಪಸ್ಥಿತಿಯಲ್ಲಿ ವೇದಪಾಠಾರಂಭ ನಡೆಯಿತು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗದ ಪ್ರಾತ್ಯಕ್ಷಿಕೆ ಜರುಗಿತು.