ಕಟಪಾಡಿ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ಭಕ್ತ ಸಾಗರ ಸಾಕ್ಷಾತ್ ಅನುಭವಿಸಿದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ -ಕಹಳೆ ನ್ಯೂಸ್

ಉಡುಪಿ : ವಿಜಯದ ಧನ್ಯತೆ ಪುರುಷೋತ್ತಮನ ಸಾಧನೆ ಮತ್ತು ಮಾರ್ಗದರ್ಶನ ಸತ್ಯದಿಂದಲೇ ರಾಜನಾಗುವ ಧೇಯ ಎಲ್ಲರೂ ಸೇರಿ ಪ್ರೀತಿಯಿಂದ ಸಮಾಧಾನದಿಂದ ಬದುಕಬೇಕೆಂಬ ಕೃಷ್ಣನ ಮೋಹನ ಗುಣ ಇವೆಲ್ಲದರ ಪ್ರತ್ಯಕ್ಷ ಸಾಕ್ಷಿಯೇ ಕಟಪಾಡಿ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ಭಕ್ತ ಸಾಗರ ಸಾಕ್ಷಾತ್ ಅನುಭವಿಸಿದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ
ತ್ರೇತಾ ಯುಗದಲ್ಲಿ ಶ್ರೀರಾಮನು ವೇದವಲ್ಲಿಗೆ ನೀಡಿದ ವಚನದಂತೆ ದ್ವಾಪರದಲ್ಲಿ ಯಶೋದ ಮಾತೆಯ ಇಚ್ಛೆಯಂತೆ ಕಲಿಯುಗದಲ್ಲಿ ಭೂಮಿಯ ಮೇಲೆ ಸಂಸಾರದ ಸಾರ್ಥಕ್ಯದ ಸಮಾಧಾನದ ಬದುಕು ಜನಸಾಮಾನ್ಯರಿಗೂ ಬೇಕು, ಕುಬೇರನ ಧನ, ವಿಶ್ವಕರ್ಮನ ಶೃಂಗಾರ,ಅಗ್ನಿಯ ಅಡುಗೆ, ವಾಯುದೇವ ನಾ ಸುಗಂಧದ್ರವ್ಯ, ವಸಿಷ್ಠ ಮಹಾ ಋಷಿಗಳ ಪೂಜಾ ಸಂಸ್ಕಾರ,ಸೂರ್ಯ ಚಂದ್ರ ರ ಬೆಳಕಿನ ಸೊಬಗು, 33 ಕೋಟಿ ದೇವತೆಗಳಿಂದ ನಿರ್ವಹಣೆಗೊಂಡು ಸ್ವತಹ ಮಹಾಲಕ್ಷ್ಮಿ ದೇವಿಯೇ ನಿಂತು ನಡೆಸುವ ಶ್ರೀ ಶ್ರೀ ನಿವಾಸನ ಕಲ್ಯಾಣ ಮಹೋತ್ಸವದ ವರ್ಣನೆಗೆ ಹೋಲಿಸುವಂತ, ಕಟಪಾಡಿ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ಶ್ರೀಮತಿ ವಿಜಯ ಪುರುಷೋತ್ತಮ ಪೈ ಕುಟುಂಬವು ಲೋಕಕಲ್ಯಾಣದ ಹಿತ ದೃಷ್ಟಿಯಿಂದ ಶ್ರೀನಿವಾಸ ಕಲ್ಯಾಣ ಶುಭ ಮಹೋತ್ಸವಕ್ಕೆ ನಾಂದಿಯಾದರು
ಆಯುಷ್ಯ ಆರೋಗ್ಯ ಮತ್ತು ಸಮಾಧಾನಕ್ಕೆ ನಿತ್ಯ ಶ್ರೀ ವೆಂಕಟರಮಣನ ಪೂಜೆ ಮತ್ತು ಸಮಾಜದೊಂದಿಗೆ ಬೆರೆತು ಬಾಳುವ ಗುಣದಿಂದಲೇ ವೆಂಕಟರಮಣನು ತನ್ನ ಜೀವನದಲ್ಲಿ ನೀಡಿದ ಸೌಭಾಗ್ಯದ ಕ್ಷಣ ಎಂದು ವಿಜಯ ಪುರುಷೋತ್ತಮ ಪೈ ದಂಪತಿಗಳು ತೃಪ್ತಿಯಿಂದ ನುಡಿದರು ಗೋವಿಂದಾ ಗೋವಿಂದ ಎಂದು ಮುಗಿಲು ಮುಟ್ಟಿದ ಭಕ್ತರ ನಾಮಘೋಷ, 15ರಿಂದ 20 ಸಾವಿರ ಭಕ್ತ ಸಮೂಹ ಪ್ರಸಾದ ಸ್ವೀಕರಿಸಿ ಊಟ ಉಪಚಾರ ಮುಗಿಸಿ ಧನ್ಯರು ಧನ್ಯರು ಎನ್ನುವ ಶುಭ ಹಾರೈಕೆಯ ತೃಪ್ತಿ ಪಡೆದ ಕಣ್ಣು ಗಳು,ಮತ್ತು ತುಂಬಿ ಬಂದ ಹೃದಯದ ಆಶೀರ್ವಾದವಾಗಿತ್ತು. ಅನೇಕ ಕಾರಣಗಳಿಂದ ತಿರುಪತಿಗೆ ಹೋಗಲಾರದ ಸಾವಿರಾರು ಭಕ್ತರಿಗೆ ಅವಕಾಶ ಮಾಡಿಕೊಟ್ಟ ಸತ್ಯೇಂದ್ರ ಪೈ ಮತ್ತು ಕೃಷ್ಣ ಮೋಹನ ಪೈಯವರಿಗೆ ಈ ಸೇವೆಯು ದೇವರು ನೀಡಿದ ಅಪೂರ್ವ ಅವಕಾಶ ಎಂದು ಅನಿಸಿತು, ಗಣ್ಯಾತಿಗಣ್ಯರು ಸ್ವಾಮೀಜಿಗಳು, ಭಕ್ತ ಸಾಗರ ಭಜನ ಮಂಡಳಿ, ಸಂಘ ಸಂಸ್ಥೆಗಳು ಮಹಿಳಾ ಮಂಡಲ ವ್ಯಾಯಮ ಶಾಲೆ, ವಿದ್ಯಾರ್ಥಿಗಳಿಗೆ ಸೇವೆ ಮಾಡಿದ ಎಲ್ಲಾರಿಗೂ ಕೃತಜ್ಞತೆಯೊಂದಿಗೆ, ಕಟಪಾಡಿ ಚರಿತ್ರೆಯಲ್ಲಿ ಹೊಸತೊಂದು ಎಂದು ಮರೆಯಲಾರದ ಕ್ಷಣ ಬರೆಯಲಾಯಿತು.









