ಕೇರಳಕ್ಕೆ ಮತ ಚಲಾಯಿಸಲು ಹೊರಟಿದ್ದಾಗ ಕಾರು ಅಪಘಾತ : ವ್ಯಕ್ತಿಯ ಸ್ಥಿತಿ ಗಂಭೀರ -ಕಹಳೆ ನ್ಯೂಸ್
ಹಾಸನ: ಏ.9 ರಂದು ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಲು ತೆರಳುತ್ತಿದ್ದಾಗ ಕಾರು ಅಪಘಾತವಾಗಿ ಕಾರಿನಲ್ಲಿದ್ದ ವ್ಯಕ್ತಿ ಗಂಭಿರವಾಗಿ ಗಾಯಗೊಂಡ ಘಟನೆ ಸಕಲೇಶಪುರದ ಮಳಲಿ ಬೈಪಾಸ್ ಬಳಿ ನಡೆದಿದೆ. ಗಾಯಾಳುವನ್ನು ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಖಾದರ್ ಮತ ಚಲಾಯಿಸಲು ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ, ರಸ್ತೆಯಿಂದ ಕೆಳಗೆ ಹಾರಿ, ಸುಮಾರು 25 ಅಡಿ ದೂರದಲ್ಲಿ...





