Monday, September 14, 2026

ದಕ್ಷಿಣ ಕನ್ನಡ

ಅಂತಾರಾಷ್ಟ್ರೀಯದಕ್ಷಿಣ ಕನ್ನಡಬಂಟ್ವಾಳಸುದ್ದಿ

ಹಾರ್ಮುಝ್ ಜಲಸಂಧಿಯಲ್ಲಿ ಹಡಗಿನ ಮೇಲೆ ಇರಾನ್ ಕ್ಷಿಪಣಿ ದಾಳಿ: ಒಮಾನ್‌ ನೌಕಾಪಡೆಯಿಂದ ಬಂಟ್ವಾಳದ ಯುವಕನ ರಕ್ಷಣೆ-ಕಹಳೆ ನ್ಯೂಸ್

ಮಂಗಳೂರು ಜಾಗತಿಕ ಉದ್ವಿಗ್ನತೆಯ ಕೇಂದ್ರಬಿಂದುವಾಗಿರುವ ಹಾರ್ಮುಝ್ ಜಲಸಂಧಿಯ ಒಮನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್ ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ನಿವಾಸಿ ರಚನ್ ಆರ್.ಕೆ. ಸೇರಿದಂತೆ 10 ಮಂದಿ ಭಾರತೀಯ ನಾವಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಳಿಗೆ ತುತ್ತಾದ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ಒಮನ್ ನೌಕಾಪಡೆ (Oman Navy) ಯಶಸ್ವಿಯಾಗಿ ರಕ್ಷಿಸಿದ್ದು, ಸದ್ಯ ರಚನ್ ಸುರಕ್ಷಿತವಾಗಿ ದುಬೈಗೆ ಪ್ರಯಾಣ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಎಸ್‌ಐಆ‌ರ್ ಫಾರಂ ಭರ್ತಿ ಮಾಡಿ ಒುಲೈ 29ರೊಳಗೆ ತಲುಪಿಸಬೇಕು ; ಜಿಲ್ಲಾಧಿಕಾರಿ ದರ್ಶನ್ -ಕಹಳೆ ನ್ಯೂಸ್

ಮಂಗಳೂರು : ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಎನ್‌ಐಆರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದರಲ್ಲಿ ಜನರ ಸಹಭಾಗಿತ್ವವೂ ಅಗತ್ಯವಾಗಿದೆ. ಹೀಗಾಗಿ ಬಿಎಲ್‌ಒಗಳು ಮನೆಗೆ ತಲುಪಿಸಿರುವ ಎಸ್‌ಐಆರ್ ಫಾರ್ಮ್ ಭರ್ತಿ ಮಾಡಿ ಜುಲೈ 29 ರೊಳಗೆ ತಲುಪಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು 11.86 ಶೇಕಡಾ ಮಾತ್ರ ಜಿಲ್ಲೆಯಲ್ಲಿ ಪ್ರಗತಿ ಆಗಿದ್ದು, ಫಾರಂಗಳನ್ನು ಡಿಜಿಟೈಜೇಶನ್ ಮಾಡಿರುವುದು ಮಾತ್ರ ಮತದಾರರ ಪಟ್ಟಿಯಲ್ಲಿ ಬರುತ್ತದೆ. ಅದು ಮತದಾರರ ಹಕ್ಕು...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಬಾಂಗ್ಲಾದೇಶಿ ಅಕ್ರಮ ವಲಸಿಗರ ಪ್ರಕರಣ ಹಿನ್ನಲೆ ಮಂಗಳೂರಿನಲ್ಲಿ ಇಬ್ಬರು, ಕೋಲ್ಕತ್ತಾದಲ್ಲಿ ಒಬ್ಬ ದಲ್ಲಾಳಿ ಬಂಧನ -ಕಹಳೆ ನ್ಯೂಸ್

ಮಂಗಳೂರು : ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಅಕ್ರಮವಾಗಿ ನೆಲೆಸಿದ್ದ 11 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಜಾಲವನ್ನು ಭೇದಿಸಿದ್ದಾರೆ. ಈ ಅಕ್ರಮ ವಲಸಿಗರನ್ನು ಮಂಗಳೂರಿಗೆ ಕರೆತಂದು ಕೆಲಸಕ್ಕೆ ನಿಯೋಜಿಸಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ಪ್ರಮುಖ ದಲ್ಲಾಳಿಗಳ (ಮಧ್ಯವರ್ತಿಗಳು) ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೂವರನ್ನೂ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಯ ಬಂಧನ -ಕಹಳೆ ನ್ಯೂಸ್

ಮಂಗಳೂರು : ಬುರ್ಖಾ ಧರಿಸಿಕೊಂಡು ಪೊಲೀಸರ ಕಣ್ತಪ್ಪಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ರೌಡಿ ಯನ್ನು ಉಳ್ಳಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಇಮ್ರಾನ್‌ ಸುರ್ಮೋ ಎಂದು ಗುರುತಿಸಲಾಗಿದೆ. ಈತ ನಗರ ಮತ್ತು ಉಡುಪಿ ಜಿಲ್ಲೆಯ ಒಟ್ಟು 23 ಪ್ರಕರಣಗಳಲ್ಲಿ ಭಾಗಿಯಾಗಿ, ಹಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರಂಟ್‌ಗಳಿದ್ದರೂ ಹಾಜರಾಗದೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಬುರ್ಖಾ ಹಾಕಿಕೊಂಡು ತಲೆಮರೆಸಿಕೊಂಡು ಓಡಾಡುತ್ತಿದ್ದನು. ಈತನ ವಿರುದ್ದ ಮಂಗಳೂರು ನಗರದ ಹಲವಾರು ಪೊಲೀಸ್...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ವಿಚಿತ್ರ ವರ್ತನೆಗೆ ವ್ಯಾಪಕ ಆಕ್ರೋಶ-ಸೂಕ್ತ ಕ್ರಮಕ್ಕೆ ಒತ್ತಾಯ -ಕಹಳೆ ನ್ಯೂಸ್

ಮಂಗಳೂರು : ಹಳೆಯ0ಗಡಿ ಸರ್ಕಾರಿ ಕಾಲೇಜಿನ ಬಿಬಿಎ ಅಂತಿಮ ವರ್ಷದ ಕೆಲವು ವಿದ್ಯಾರ್ಥಿ-ವಿದ್ಯಾರ್ಥಿನಿಗಳು ತಮ್ಮ ಸಮವಸ್ತ್ರವನ್ನು ಹರಿದು ಚೂರುಚೂರು ಮಾಡಿರುವುದು, ಸಮವಸ್ತ್ರದ ಮೇಲೆ ಮಾರ್ಕರ್‌ನಿಂದ ಸಹಿ ಹಾಕಿರುವುದು ಹಾಗೂ ಪರಸ್ಪರರ ಸಮವಸ್ತ್ರದ ಮೇಲೂ ಸಹಿ ಹಾಕಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ ಈ ಬಗ್ಗೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮವಸ್ತ್ರವು ಕೇವಲ ಒಂದು ಬಟ್ಟೆಯಲ್ಲ; ಅದು ನಮ್ಮ ಶಾಲೆ-ಕಾಲೇಜಿನ ಶಿಸ್ತು, ಗೌರವ ಮತ್ತು ಗುರುತಿನ ಪ್ರತೀಕ. ಅದನ್ನು ಈ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಧ್ವ ಮಂಟಪಕ್ಕೆ ಪೇಜಾವರ ಶ್ರೀಗಳ ಭೇಟಿ; ಓಂಕಾರ ಫ್ರೆಂಡ್ಸ್ (ರಿ.) ಮಧ್ವ ವತಿಯಿಂದ ಪಾದಪೂಜೆ -ಕಹಳೆ ನ್ಯೂಸ್

ಬಂಟ್ವಾಳ : ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೋಮವಾರ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವದಲ್ಲಿರುವ ಶ್ರೀ ಮಧ್ವಾಚಾರ್ಯರು ವಿಶ್ರಾಂತಿ ಪಡೆದ ಪವಿತ್ರ ಕ್ಷೇತ್ರವಾದ ಶ್ರೀ ಮಧ್ವ ಮಂಟಪಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಓಂಕಾರ ಫ್ರೆಂಡ್ಸ್ (ರಿ.) ಹಾಗೂ ಓಂಕಾರ ಮಹಿಳಾ ಘಟಕ, ಮಧ್ವ ವತಿಯಿಂದ ಶ್ರೀಗಳಿಗೆ ಭಕ್ತಿಪೂರ್ವಕವಾಗಿ ಪಾದಪೂಜೆ ನೆರವೇರಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೆ, ಶ್ರೀ...
ದಕ್ಷಿಣ ಕನ್ನಡಪುತ್ತೂರುರಾಜ್ಯಶಿಕ್ಷಣಸುದ್ದಿ

ಪುತ್ತೂರು ವಿಧಾನಸಭಾ ಕ್ಷೇತ್ರ: ಪ್ರತೀ ಗ್ರಾಮಕ್ಕೊಂದು ಕೆಪಿಎಸ್ ಶಾಲೆ ಮಂಜೂರು ಮಾಡಿ: ಶಾಸಕ ಅಶೋಕ್ ರೈ ಮನವಿ -ಕಹಳೆ ನ್ಯೂಸ್

ಪುತ್ತೂರು: ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತನ್ನ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಕ್ಕೊಂದರಂತೆ ಕೆಪಿಎಸ್ ಶಾಲೆಯನ್ನು ಮಂಜೂರುಗೊಳಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ರಶ್ಮಿ ಮಹೇಶ್ ರವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಇಲಾಖಾ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಈ ಮನವಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ಬಡ ಮಕ್ಕಳು ಗುಣ ಮಟ್ಟದ ಶಿಕ್ಷಣದಿಂದ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವೀರಕಂಭ ಗ್ರಾಮದ ಗೋಳಿಮಾರು ಜನಾರ್ಧನ ಪೂಜಾರಿಯವರ ನೂತನ ಗೃಹಪ್ರವೇಶ “ಬ್ರಹ್ಮಶ್ರೀ” ನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಗುರುತತ್ವವಾಹಿನಿ 70ನೇ ಮಾಲಿಕೆ ಕಾರ್ಯಕ್ರಮ : ಪ್ರಕೃತಿಯ ನಾಶ ಜಗತ್ತು ಸರ್ವನಾಶ: ನಾರಾಯಣ ಗುರುಗಳ ಸಂದೇಶ ನೆನಪಿಸಿದ ದಿನೇಶ್ ಸುವರ್ಣ ರಾಯಿ -ಕಹಳೆ ನ್ಯೂಸ್

ಕಲ್ಲಡ್ಕ : "ಪ್ರಕೃತಿಯ ನಾಶ ಜಗತ್ತು ಸರ್ವನಾಶ" ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ಪರಿಸರ ಸಂರಕ್ಷಣೆಯ ಸಂದೇಶದ ಸಾರವಾಗಿದೆ. ಪ್ರಕೃತಿಯನ್ನು ನಾಶ ಮಾಡಿದರೆ ಅದರ ದುಷ್ಪರಿಣಾಮ ಇಡೀ ಮಾನವಕುಲ ಹಾಗೂ ಜೀವಜಗತ್ತಿನ ಮೇಲೆ ಬೀಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಕೃತಿಯನ್ನು ಪೂಜ್ಯಭಾವದಿಂದ ಕಾಪಾಡಿ, ಉಳಿಸಿ, ಬೆಳೆಸಬೇಕು ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹೇಳಿದರು. ಅವರು ಜು.9 ಗುರುವಾರ ಯುವವಾಹಿನಿ (ರಿ.) ಬಂಟ್ವಾಳ ಘಟಕದ...
1 5 6 7 8 9 753
Page 7 of 753