ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ವಿಚಿತ್ರ ವರ್ತನೆಗೆ ವ್ಯಾಪಕ ಆಕ್ರೋಶ-ಸೂಕ್ತ ಕ್ರಮಕ್ಕೆ ಒತ್ತಾಯ -ಕಹಳೆ ನ್ಯೂಸ್

ಮಂಗಳೂರು : ಹಳೆಯ0ಗಡಿ ಸರ್ಕಾರಿ ಕಾಲೇಜಿನ ಬಿಬಿಎ ಅಂತಿಮ ವರ್ಷದ ಕೆಲವು ವಿದ್ಯಾರ್ಥಿ-ವಿದ್ಯಾರ್ಥಿನಿಗಳು ತಮ್ಮ ಸಮವಸ್ತ್ರವನ್ನು ಹರಿದು ಚೂರುಚೂರು ಮಾಡಿರುವುದು, ಸಮವಸ್ತ್ರದ ಮೇಲೆ ಮಾರ್ಕರ್‌ನಿಂದ ಸಹಿ ಹಾಕಿರುವುದು ಹಾಗೂ ಪರಸ್ಪರರ ಸಮವಸ್ತ್ರದ ಮೇಲೂ ಸಹಿ ಹಾಕಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ
ಈ ಬಗ್ಗೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮವಸ್ತ್ರವು ಕೇವಲ ಒಂದು ಬಟ್ಟೆಯಲ್ಲ; ಅದು ನಮ್ಮ ಶಾಲೆ-ಕಾಲೇಜಿನ ಶಿಸ್ತು, ಗೌರವ ಮತ್ತು ಗುರುತಿನ ಪ್ರತೀಕ. ಅದನ್ನು ಈ ರೀತಿ ಅವಮಾನಿಸುವುದು ಶಿಕ್ಷಣ ಸಂಸ್ಥೆಯ ಘನತೆಗೆ ಧಕ್ಕೆ ತರುವ ಕೃತ್ಯ. ಹಿರಿಯ ವಿದ್ಯಾರ್ಥಿಗಳು ಹೀಗೆ ವರ್ತಿಸಿದರೆ, ಕಿರಿಯ ವಿದ್ಯಾರ್ಥಿಗಳು ಅದನ್ನೇ ಅನುಸರಿಸುವ ಸಾಧ್ಯತೆ ಇದೆ. ಇಂತಹ ಜವಾಬ್ದಾರಿಯಿಲ್ಲದ ನಡೆಗೆ ಕಾರಣರಾದವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು.
ಈ ಘಟನೆ ಕುರಿತು ಕಾಲೇಜು ಆಡಳಿತ ಹಾಗೂ ಸಂಬಂಧಪಟ್ಟ ಶಿಕ್ಷಕರು ಸೂಕ್ತ ಕ್ರಮ ಕೈಗೊಂಡು, ಇಂತಹ ಘಟನೆಗಳು ಮತ್ತೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ . ಪದವಿ ಪಡೆಯುವುದಕ್ಕಿಂತ ಮೊದಲು ಸಂಸ್ಕಾರವನ್ನು ಕಲಿಯಿರಿ. ಶಿಕ್ಷಣ ಸಂಸ್ಥೆಯ ಗೌರವ ಉಳಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ ಎಂದು ಪ್ರತಿಕ್ರಿಯಿಸಿದ್ದಾರೆ










