Sunday, June 14, 2026

ಸುದ್ದಿ

ಸುದ್ದಿ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹುಂಡಿಯಲ್ಲಿ ರೂ 1.94 ಕೋಟಿ ಕಾಣಿಕೆ-ಕಹಳೆ ನ್ಯೂಸ್

ಉಡುಪಿ: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಹುಂಡಿ ಎಣಿಕೆ ಕಾರ್ಯ ಸೋಮವಾರ ನಡೆಯಿತು. ದೇವಸ್ಥಾನದ 41 ಹುಂಡಿಗಳನ್ನು ತೆರೆಯಲಾಗಿದ್ದು, ಭಕ್ತರಿಂದ ಅಪಾರ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ದೇವಸ್ಥಾನ ಮೂಲಗಳ ಪ್ರಕಾರ, ಹುಂಡಿಗಳಲ್ಲಿ ಒಟ್ಟು ರೂ 1,90,43,819 ನಗದು ಮೊತ್ತ ಲಭಿಸಿದೆ. ಇನ್ನು ಇತರೆ ಕಾಣಿಕೆಗಳನ್ನು ಸೇರಿಸಿ ಒಟ್ಟು ಸಂಗ್ರಹ ಮೊತ್ತ ರೂ 1,94,44,173ಕ್ಕೆ ಏರಿಕೆಯಾಗಿದೆ. ಇದಲ್ಲದೆ, ಭಕ್ತರು ಕಾಣಿಕೆಯಾಗಿ ಸಲ್ಲಿಸಿದ್ದ 0.325 ಗ್ರಾಂ ಚಿನ್ನ ಹಾಗೂ 2.370 ಕೆ.ಜಿ...
ಸುದ್ದಿ

ವಿರೋಧದ ನಡುವೆಯೂ ಮಧ್ಯರಾತ್ರಿ ಹಂಪಿಯ ವಿರೂಪಾಕ್ಷ ದೇಗುಲದ ‘ಲಕ್ಷ್ಮೀ’ ಕೊನೆಗೂ ಕೋಲಾರಕ್ಕೆ ಸ್ಥಳಾಂತರ-ಕಹಳೆ ನ್ಯೂಸ್

ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದ ಆನೆ ‘ಲಕ್ಷ್ಮೀ’ಯನ್ನು ತೀವ್ರ ವಿರೋಧ ಹಾಗೂ ಆಕ್ರೋಶದ ನಡುವೆಯೂ ಕೊನೆಗೂ ಕೋಲಾರಕ್ಕೆ(Kolara) ಸ್ಥಳಾಂತರ ಮಾಡಲಾಗಿದೆ. ಮುಜರಾಯಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತದ ನೇತೃತ್ವದಲ್ಲಿ ತಡರಾತ್ರಿ 1 ಗಂಟೆಯ ಬಳಿಕ ಅತ್ಯಂತ ಗೌಪ್ಯವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಲಕ್ಷ್ಮೀಯನ್ನು  ಹಂಪಿಯಿಂದ ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿ ನಿನ್ನೆಯಷ್ಟೇ ಸ್ಥಳೀಯರು ಹಾಗೂ ಭಕ್ತರು ತೀವ್ರ ಹೋರಾಟ ನಡೆಸಿದ್ದರು. ಇತ್ತ ಸಾಮಾಜಿಕ ಜಾಲತಾಣಗಳಲ್ಲೂ ಆನೆಯನ್ನು ಹಂಪಿಯಲ್ಲೇ...
ಸುದ್ದಿ

ರಾಜ್ಯದಲ್ಲಿ ವರುಣಾರ್ಭಟ : ಬಿಸಿಲಿನಿಂದ ತತ್ತರಿಸಿದ ಜನರಿಗೆ ತಂಪು, ಹಲವೆಡೆ ಅವಾಂತರ ಸೃಷ್ಟಿ-ಕಹಳೆ ನ್ಯೂಸ್

ರಾಯಚೂರು/ಕಲಬುರಗಿ: ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿದ್ದು, ಬಿಸಿಲಿನಿಂದ ತತ್ತರಿಸಿದ ಜನರಿಗೆ ತಂಪೆರೆದಿದ್ದಾನೆ. ಇನ್ನೊಂದೆಡೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ರಾಯಚೂರಿನಲ್ಲಿ  ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದ್ದು, ಬೆಳಗಿನ ಜಾವದಿಂದ ಬಿಟ್ಟು ಬಿಡದೇ ಸುರಿಯುತ್ತಿದೆ. ಬೀದಿಬದಿ ವ್ಯಾಪಾರಿಗಳು ಮಳೆಯಲ್ಲೇ ತರಕಾರಿ ಮಾರುತ್ತಿದ್ದಾರೆ. ಇದರ ನಡುವೆ ರಾಯಚೂರು ತಾಲೂಕಿನ ಕಡಗಂದೊಡ್ಡಿಯಲ್ಲಿ ರೈತ ವಿರೇಶ್ ಅವರಿಗೆ ಸಿಡಿಲು ಬಡಿದಿದ್ದು, ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.  ಇನ್ನೂ ಕಲಬುರಗಿಯಲ್ಲಿ ಬೆಳಗ್ಗೆಯಿಂದ ಗುಡುಗು, ಸಿಡಿಲು...
ಬೆಂಗಳೂರುರಾಜ್ಯಸುದ್ದಿ

ಆಪ್ತರ ಜೊತೆ ಇಂದು ಸಿದ್ದರಾಮಯ್ಯ ಸಭೆ! -ಕಹಳೆ ನ್ಯೂಸ್

ಬೆಂಗಳೂರು: ದೆಹಲಿಯಿಂದ ರಾಜಧಾನಿಗೆ ಮರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿನ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ವಾಪಸ್ ಆದ ಬೆನ್ನಲ್ಲೇ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ತಡರಾತ್ರಿ ಸಣ್ಣ ಸಭೆ ನಡೆದಿದೆ. ಮಧ್ಯರಾತ್ರಿ 12 ಗಂಟೆಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ  ಆಗಮಿಸಿದ ಸಿದ್ದರಾಮಯ್ಯನವರನ್ನು ಸಚಿವರಾದ ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರು ಬರಮಾಡಿಕೊಂಡರು. ನಂತರ ಮುಖ್ಯಮಂತ್ರಿಗಳ ಕಾರಿನಲ್ಲೇ ಸಚಿವ ಜಮೀರ್...
ರಾಜ್ಯಸುದ್ದಿ

ಡಿಕೆಶಿ ಹೇಳಿಕೆಗೆ ವಿರೋಧ : ಮೋದಿಗೆ ಪತ್ರ ಬರೆದು ಮೇಕೆದಾಟು DPR ತಿರಸ್ಕರಿಸುವಂತೆ ವಿಜಯ್‌ ಒತ್ತಾಯ -ಕಹಳೆ ನ್ಯೂಸ್

ಚೆನ್ನೈ: ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ಸರ್ಕಾರದ  ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆಯ ಭೂಮಿ ಪೂಜೆ ಘೋಷಣೆಗೆ ತಮಿಳುನಾಡು  ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್  ಅವರು ಪ್ರಧಾನಿ ನರೇಂದ್ರ ಮೋದಿ  ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಾರ್ವಜನಿಕ ಹೇಳಿಕೆಗಳು ಹಾಗೂ ಭೂಮಿ ಪೂಜೆಯ  ಘೋಷಣೆಯು, ಜೀವನೋಪಾಯಕ್ಕಾಗಿ ಕಾವೇರಿ...
ಸುದ್ದಿ

ಜೋಕ್ ಮಾಡಿ ನಕ್ಕಿದ್ದ ಮೂವರು ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ಮಾಡಿದ ಮುಖ್ಯಮಂತ್ರಿ ವಿಜಯ್..!!-ಕಹಳೆ ನ್ಯೂಸ್

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಹತ್ತು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ, ಇಂತಹ ಅತ್ಯಂತ ಸೂಕ್ಷ್ಮ ಹಾಗೂ ದಾರುಣ ಘಟನೆಯ ತನಿಖೆ ನಡೆಸುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮೂವರು ಐಪಿಎಸ್ (IPS) ಅಧಿಕಾರಿಗಳು ನಡೆದುಕೊಂಡ ರೀತಿ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಆ ಮೂವರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶಿಸಿದ್ದಾರೆ. ಅಸಲಿಗೆ ನಡೆದಿದ್ದೇನು?...
ಸುದ್ದಿ

ಎಸ್.ಡಿ.ಎಂ. ಸಂಸ್ಥೆಗಳ ಸಾಧನೆಗಳ ಅನಾವರಣ: Institutions of Legacy’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಹೆಗ್ಗಡೆಯವರಿಂದ ಲೋಕಾರ್ಪಣೆ-ಕಹಳೆ ನ್ಯೂಸ್

ಧರ್ಮಸ್ಥಳ -ಕಹಳೆ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್‌ಡಿಎಂ ಸಂಸ್ಥೆಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಯಣವನ್ನು ದಾಖಲಿಸುವ Institutions of Legacy ಕಾಫಿ ಟೇಬಲ್ ಪುಸ್ತಕವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಂಡಿತು. Academic Insights ಸಂಸ್ಥೆಯ ವತಿಯಿಂದ ಪ್ರಕಟಿತ ಈ ಕೃತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು.   ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಹೆಗ್ಗಡೆಯವರು, ಶ್ರೀ ರತ್ನವರ್ಮ ಹೆಗ್ಗಡೆಯವರ ದೂರದೃಷ್ಟಿಯ ನಾಯಕತ್ವದಲ್ಲಿ ಆರಂಭವಾದ...
ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಕಂಭ ಒಕ್ಕೂಟ ಅಧ್ಯಕ್ಷರಾಗಿ ಸುನಿಲ್ ನಾಯ್ಕ ಆಯ್ಕೆ-ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ವಿಟ್ಲ ಇದರ ಕಲ್ಲಡ್ಕ ವಲಯದ ವೀರಕಂಭ ಒಕ್ಕೂಟದ ನೂತನ ಅಧ್ಯಕ್ಷರಾಗಿ ಸುನಿಲ್ ನಾಯ್ಕ ಆಯ್ಕೆಯಾಗಿದ್ದಾರೆ. ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರೇಮ ಕಾಣೆ ಕೋಡಿ, ಕಾರ್ಯದರ್ಶಿಯಾಗಿ ಅಖಿಲ ಮೈರಾ, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಮಜಿ, ಕೋಶಾಧಿಕಾರಿಯಾಗಿ ನೋಣಯ್ಯ ಎಂ ಆರ್ ಮಜಿ ರವರನ್ನು ಆಯ್ಕೆ...
1 23 24 25 26 27 3,392
Page 25 of 3392