Sunday, June 14, 2026

ಸುದ್ದಿ

ಸುದ್ದಿ

ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಮಳೆಗಾಲದ ಮುನ್ನೆಚ್ಚರಿಕೆ – ಪೂರ್ವ ತಯಾರಿ ಕುರಿತು ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿ ಸಭೆ-ಕಹಳೆ ನ್ಯೂಸ್

ಕಲ್ಲಡ್ಕ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಮಳೆಗಾಲದ ಮುನ್ನೆಚ್ಚರಿಕೆಯ ಪೂರ್ವ ತಯಾರಿ ಕುರಿತು ವೀರಕಂಭ ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯು ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ವೀರಕಂಭ ಗ್ರಾಮಪಂಚಾಯತ್ ಆಡಳಿತ ಅಧಿಕಾರಿ ದಿನೇಶ್ ರವರ ಅಧ್ಯಕ್ಷತೆಯಲ್ಲಿ ವೀರಕಂಭ ಗ್ರಾಮ ಪಂಚಾಯತಿನಲ್ಲಿ ಮೇ 27ನೇ ಬುಧವಾರ ಜರಗಿತು ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಲ್ಲುಕೋರೆಗಳ ಹೊಂಡಗಳು, ಕೆರೆಗಳು, ಕಾಲುಸಂಕಗಳ ಕುರಿತಾಗಿ ಮಳೆಗಾಲ ಪೂರ್ವದಲ್ಲಿ ಅನುಸರಿಸಬೇಕಾದ...
ಸುದ್ದಿ

ಸೌದಿ ಅರೇಬಿಯಾ : 20 ವರ್ಷಗಳ ಬಳಿಕ ಕೇರಳಂನ ಅಬ್ದುಲ್ ರಹೀಮ್ , ಬಿಡುಗಡೆಗೆ ಆದೇಶ-ಕಹಳೆ ನ್ಯೂಸ್

ರಿಯಾದ್: ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದ ಎರಡು ದಶಕಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಫೆರೋಕ್ ಸಮೀಪದ ಕೊಡಂಪುಳ ನಿವಾಸಿ ಅಬ್ದುಲ್ ರಹೀಮ್ ಬಿಡುಗಡೆಗೆ ಸಂಬಂಧಿಸಿದ ಅಧಿಕೃತ ಆದೇಶಕ್ಕೆ ಸೌದಿ ಅಧಿಕಾರಿಗಳು ಸಹಿ ಹಾಕಿದ್ದಾರೆ. ಅಬ್ದುಲ್ ರಹೀಮ್ ಕಾನೂನು ಸಹಾಯ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಈ ವಿಷಯವನ್ನು ತಿಳಿಸಿದ್ದು ಅವರ Exit Visa ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ. ಈಗ ವಲಸೆ ಸಂಬಂಧಿತ ಅಂತಿಮ ಕಾರ್ಯವಿಧಾನಗಳು ಮಾತ್ರ ಬಾಕಿ...
ಸುದ್ದಿ

ಇರಾನ್ ಮೇಲೆ ಮತ್ತೆ ಅಮೆರಿಕ ದಾಳಿ : ಕದನ ವಿರಾಮ ಮಾತುಕತೆ ವಿಫಲ -ಕಹಳೆ ನ್ಯೂಸ್

ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ  ಅಮೆರಿಕ ಮತ್ತೆ ದಾಳಿ ನಡೆಸಿದೆ. ಇರಾನ್‌ನ   ಮಿಲಿಟರಿ ತಾಣವನ್ನು ಗುರಿಯಾಗಿಸಿಕೊಂಡು ಅಮೆರಿಕ   ಸೇನೆಯು ರಾತ್ರಿಯಿಡೀ ದಾಳಿ ನಡೆಸಿದೆ. ಈ ವೇಳೆ ಇರಾನ್ ಕೂಡ ಪ್ರತಿದಾಳಿ ಮಾಡಿದ್ದು, ಇರಾನಿನ ಡ್ರೋನ್‌ಗಳನ್ನು ಅಮೆರಿಕ ಹೊಡೆದುರುಳಿಸಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂದರ್ ಅಬ್ಬಾಸ್ ಬಳಿ ದಾಳಿಯ ಬಳಿಕ ಇರಾನ್ ಅಮೆರಿಕದ ಸೇನಾ ನೆಲೆ ಮೇಲೆ ಪ್ರತೀಕಾರದ ದಾಳಿ ನಡೆಸಿದೆ. ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್...
ಬೆಂಗಳೂರುರಾಜ್ಯಸುದ್ದಿ

ರಾಜಕೀಯ ಬೆಳವಣಿಗೆ ಮಧ್ಯೆ ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್‌ -ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲ(Governor) ಥಾವರ್ ಚಂದ್ ಗೆಹ್ಲೋಟ್(Thawar Chand Gehlot) ಅವರು ಮಧ್ಯರಾತ್ರಿ ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಹತ್ತಿರ ಸಂಬಂಧಿಕರೊಬ್ಬರ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್ಯಪಾಲರು ತುರ್ತಾಗಿ ಮುಂಬೈಗೆ ತೆರಳಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಬುಧವಾರ ತಡರಾತ್ರಿ 11:45 ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಮುಂಬೈಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ...
ಬೆಂಗಳೂರುರಾಜ್ಯಸುದ್ದಿ

ಇಂದು ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ : ಆಪ್ತರಿಗೆ ಔತಣಕೂಟದ ಜೊತೆ ವಿದಾಯ – ಕಹಳೆ ನ್ಯೂಸ್

ಬೆಂಗಳೂರು: ಅಹಿಂದ ನಾಯಕ ಸಿದ್ದರಾಮಯ್ಯ ರಾಜಕೀಯ ಬದುಕಿನ ಮಹತ್ವದ ಅಧ್ಯಾಯಕ್ಕೆ ತೆರೆ ಬೀಳುತ್ತಿದೆ. ಕಾಂಗ್ರೆಸ್‌ನಲ್ಲಿ (Congress) ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ತಿದ್ದಾರೆ. ರಾಜ್ಯದ ಒಬ್ಬ ಟಾಪ್ ಮಾಸ್ ಲೀಡರ್ ಆಗಿದ್ದ ಸಿದ್ದರಾಮಯ್ಯ ಅಧಿಕಾರ ರಾಜಕೀಯ ಈ ನಿರ್ಗಮನದೊಂದಿಗೆ ಕೊನೆಗೊಳ್ತಿದೆ. ಕಳೆದೆರಡು ದಿನಗಳಿಂದ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬಿರುಸಿನ ವಿದ್ಯಮಾನಗಳು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿವೆ. ಮೊದಲೇ ನಿರ್ಣಯಿಸಿದಂತೆ ಇಂದು ಸಿದ್ದರಾಮಯ್ಯ ತಮ್ಮ ಸಿಎಂ...
ದೆಹಲಿರಾಜ್ಯಸುದ್ದಿ

8 ಗಂಟೆ ಆಗಸದಲ್ಲೇ ಹಾರಾಟ : ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್ – ಕಹಳೆ ನ್ಯೂಸ್

ನವದೆಹಲಿ: 230 ಪ್ರಯಾಣಿಕರನ್ನು ಹೊತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ  8 ಗಂಟೆಗಳ ಕಾಲ ಆಗಸದಲ್ಲೇ ಹಾರಾಟ ನಡೆಸಿ ದೆಹಲಿಗೆ  ವಾಪಸ್ ಆಗಿದೆ. ಮೇ 27ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ  ಹೊರಟಿದ್ದ ಎಐ173 ವಿಮಾನವು ಮೂರು ಗಂಟೆಗಳ ಹಾರಾಟ ನಡೆಸಿ ಬಳಿಕ ತಾಂತ್ರಿಕ ದೋಷ ಹಿನ್ನೆಲೆ ಚೀನಾ ವಾಯುಪ್ರದೇಶದಿಂದ ಯೂಟರ್ನ್ ತೆಗೆದುಕೊಂಡು ದೆಹಲಿಗೆ ಹಿಂತಿರುಗಿದೆ. ಸದ್ಯ ವಿಮಾನ ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ತಾಂತ್ರಿಕ...
ಸುದ್ದಿ

ಸ್ನ್ಯಾಪ್‌ಚಾಟ್‌ (Snapchat)ನಲ್ಲಿ ಪರಿಚಯ, ಪ್ರೀತಿಸಿ ಮದುವೆ : ಎರಡೇ ತಿಂಗಳಲ್ಲಿ ಪತ್ನಿ ಬೇಡ ಎಂದ ಪತಿ-ಕಹಳೆ ನ್ಯೂಸ್

ಬೆಂಗಳೂರು: ಸ್ನ್ಯಾಪ್‌ಚಾಟ್‌ನಲ್ಲಿ  ಪರಿಚಯವಾಗಿ ಒಂದು ವರ್ಷದ ಪ್ರೀತಿಗೆ ಮದುವೆಯಾದ ಎರಡೇ ತಿಂಗಳಲ್ಲಿ ಸಣ್ಣಪುಟ್ಟ ಗಲಾಟೆಯಾಗಿ ಪತಿ ಪತ್ನಿಯನ್ನೇ ಬೇಡ ಎಂದು ತಿರಸ್ಕರಿಸಿರುವ ಘಟನೆ ಬೆಂಗಳೂರಿನಲ್ಲಿ  ನಡೆದಿದೆ. ನನಗೆ ಗಂಡ ಬೇಕು ಎಂದು ನೊಂದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಮಹಿಳೆ ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾಗಿದ್ದ ಚೇತನ್ ಜೊತೆ 2 ತಿಂಗಳ ಜೊತೆ ವಿವಾಹವಾಗಿದ್ದರು. ಮೂಲತಃ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿಯಾಗಿರುವ ಚೇತನ್...
ರಾಜ್ಯಸುದ್ದಿ

ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತಾ ಲೋಪ : 78 ಗ್ರಾಂ ಚಿನ್ನ, ಅಮೂಲ್ಯ ವಜ್ರಾಭರಣ ನಾಪತ್ತೆ -ಕಹಳೆ ನ್ಯೂಸ್

ತಿರುವನಂತಪುರಂ: ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ 78 ಗ್ರಾಂ ಚಿನ್ನಾಭರಣಗಳು ಹಾಗೂ ಅಮೂಲ್ಯ ವಜ್ರಾಭರಣ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ದೇವಸ್ಥಾನದ ಅಮೂಲ್ಯ ಖಜಾನೆಯ ಭದ್ರತೆ ಕುರಿತು ಇದೀಗ ಗಂಭೀರ ಪ್ರಶ್ನೆಗಳು ಕೇಳಿಬಂದಿವೆ. ಪೊಲೀಸ್ ಮಹಾನಿರ್ದೇಶಕರು ಗೃಹ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿ ಪ್ರಕಾರ, ದೇವಸ್ಥಾನದ ಸಂಗ್ರಹದಲ್ಲಿದ್ದ ಸುಮಾರು 78 ಗ್ರಾಂ ಚಿನ್ನಾಭರಣಗಳು ಹಾಗೂ ‘ವೈರಂ ನಾಮ’ ಎಂದು ಕರೆಯಲಾಗುವ ವಜ್ರಾಭರಣ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ದೇವಸ್ಥಾನದಲ್ಲಿನ ಪ್ರಸ್ತುತ ಭದ್ರತಾ ವ್ಯವಸ್ಥೆ...
1 21 22 23 24 25 3,391
Page 23 of 3391