Sunday, June 14, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಹಿಂದೂ ಎಕನಾಮಿಕ್ ಫೋರಂ ಮತ್ತು ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ ವತಿಯಿಂದ   ಸಮಗ್ರ ಮಲ್ಲಿಗೆ ಕೃಷಿ ತರಬೇತಿ -ಕಹಳೆ ನ್ಯೂಸ್

 ಪುತ್ತೂರು : ಹಿಂದೂ ಎಕನಾಮಿಕ್ ಫೋರಂ ಮತ್ತು ಮುಳಿಯ ಮ್ಯಾನೇಜ್ಡ್ ಫಾರ್ಮ ಲ್ಯಾಂಡ್ ವತಿಯಿಂದ  ಜು. 14 ರಂದು ಸಮಗ್ರ ಮಲ್ಲಿಗೆ ಕೃಷಿ ನಿರ್ವಹಣೆ ಮತ್ತು ಮಾರುಕಟ್ಟೆ ವಿಷಯದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.

ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಎಕನಾಮಿಕ್ ಫೋರಂ ನ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಮೋಹನ ಕೆ ಯವರು ವಹಿಸಿದರು. ಪ್ರಾಸ್ತಾವಿಕ,ಕಾರ್ಯಕ್ರಮದ ಉದ್ದೇಶ ಮತ್ತು ಸ್ವಾಗತವನ್ನು ಹಿಂದೂ ಎಕನಾಮಿಕ್ ಅಧ್ಯಕ್ಷರಾದ ಶ್ರೀ ಮೋಹನ ಕೆ ಯವರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನೆಯನ್ನು ಮಲ್ಲಿಗೆ ಕೃಷಿ ತರಬೇತಿಯ ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಾಮಕೃಷ್ಣ ಶರ್ಮ ಶಂಕರಪುರ ರವರು ನೆರವೇರಿಸಿದರು.

ಮುಖ್ಯ ಅತಿಥಿಯಾದ ಶ್ರೀಮತಿ ಕೃಷ್ಣವೇಣಿ ಮುಳಿಯರವರು ಕಾರ್ಯಕ್ರಮದ ಉದ್ದೇಶ ಮತ್ತು ಸ್ವಾವಲಂಬಿ ಜೀವನಕ್ಕೆ ಮಲ್ಲಿಗೆ ಕೃಷಿ ಹೇಗೆ ಉಪಯೋಗ ಆಗಬಹುದು ಮತ್ತು ಹಿಂದೂ ಎಕನಾಮಿಕ್ ಫಾರಂನ ಮಹಿಳಾ ಘಟಕದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಎಲ್ಲರಿಗೆ ಶುಭವನ್ನು ಕೋರಿದರು.

ಹಿಂದೂ ಎಕನಾಮಿಕ್ ಫೋರಂ ನ ಸ್ಥಾಪಕಾಧ್ಯಕ್ಷ ಕೃಷ್ಣ ಮೋಹನ್ ರವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ವೇದಿಕೆಯಲ್ಲಿ ಹಿಂದೂ ಎಕನಾಮಿಕ್ ಫೋರಂ ನ ಮಹಿಳಾ ಘಟಕದ ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ, ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಮುತ್ಲಾಜೆ, ಹಿಂದೂ ಎಕನಾಮಿಕ್ ಫೋರಂ ನ ಕಾರ್ಯದರ್ಶಿ ಅನೂಪ್ ಕೆ ಜೆ ಉಪಸ್ಥಿತರಿದ್ದರು.

ಸುಮಾರು 120ಜನ ಅಭ್ಯರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯದರ್ಶಿ ಅನೂಪ್ ಕೆ ಜೆ ಯವರು ಧನ್ಯವಾದ ಸಮರ್ಪಣೆ ನೆರವೇರಿಸಿದರು.