ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಕಂಭ ಒಕ್ಕೂಟ ಅಧ್ಯಕ್ಷರಾಗಿ ಸುನಿಲ್ ನಾಯ್ಕ ಆಯ್ಕೆ-ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ವಿಟ್ಲ ಇದರ ಕಲ್ಲಡ್ಕ ವಲಯದ ವೀರಕಂಭ ಒಕ್ಕೂಟದ ನೂತನ ಅಧ್ಯಕ್ಷರಾಗಿ ಸುನಿಲ್ ನಾಯ್ಕ ಆಯ್ಕೆಯಾಗಿದ್ದಾರೆ.
ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಪ್ರೇಮ ಕಾಣೆ ಕೋಡಿ, ಕಾರ್ಯದರ್ಶಿಯಾಗಿ ಅಖಿಲ ಮೈರಾ, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಮಜಿ, ಕೋಶಾಧಿಕಾರಿಯಾಗಿ ನೋಣಯ್ಯ ಎಂ ಆರ್ ಮಜಿ ರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕ ಶುಕರಾಜ್, ಒಕ್ಕೂಟ ಸೇವಾ ಪ್ರತಿನಿಧಿಗಳಾದ ವಿಜಯ, ರೇವತಿ, ನಿಕಟ ಪೂರ್ವ ಅಧ್ಯಕ್ಷ ಶಾಂಭವಿ ಆಚಾರ್ಯ, ಕಾರ್ಯದರ್ಶಿ ಆನಂದ ಮಜಿ, ಉಪಸಮಿತಿಯ ಸದಸ್ಯೆ ವೇದಾವತಿ ಉಪಸ್ಥಿತರಿದ್ದರು.










