ವಿರೋಧದ ನಡುವೆಯೂ ಮಧ್ಯರಾತ್ರಿ ಹಂಪಿಯ ವಿರೂಪಾಕ್ಷ ದೇಗುಲದ ‘ಲಕ್ಷ್ಮೀ’ ಕೊನೆಗೂ ಕೋಲಾರಕ್ಕೆ ಸ್ಥಳಾಂತರ-ಕಹಳೆ ನ್ಯೂಸ್

ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದ ಆನೆ ‘ಲಕ್ಷ್ಮೀ’ಯನ್ನು ತೀವ್ರ ವಿರೋಧ ಹಾಗೂ ಆಕ್ರೋಶದ ನಡುವೆಯೂ ಕೊನೆಗೂ ಕೋಲಾರಕ್ಕೆ(Kolara) ಸ್ಥಳಾಂತರ ಮಾಡಲಾಗಿದೆ. ಮುಜರಾಯಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತದ ನೇತೃತ್ವದಲ್ಲಿ ತಡರಾತ್ರಿ 1 ಗಂಟೆಯ ಬಳಿಕ ಅತ್ಯಂತ ಗೌಪ್ಯವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಲಕ್ಷ್ಮೀಯನ್ನು ಹಂಪಿಯಿಂದ ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿ ನಿನ್ನೆಯಷ್ಟೇ ಸ್ಥಳೀಯರು ಹಾಗೂ ಭಕ್ತರು ತೀವ್ರ ಹೋರಾಟ ನಡೆಸಿದ್ದರು. ಇತ್ತ ಸಾಮಾಜಿಕ ಜಾಲತಾಣಗಳಲ್ಲೂ ಆನೆಯನ್ನು ಹಂಪಿಯಲ್ಲೇ ಉಳಿಸಿಕೊಳ್ಳಬೇಕು ಎಂದು ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟೆಲ್ಲಾ ವಿರೋಧಗಳಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಡರಾತ್ರಿಯ ಕಾರ್ಯಾಚರಣೆಯ ಹಾದಿ ಹಿಡಿಯಿತು.










