Saturday, June 13, 2026
ಸುದ್ದಿ

‘ಅಗ್ನಿವೀರ್’ಗೆ ಆಯ್ಕೆಯಾದ ಪ್ರಫುಲ್‌ಗೆ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ಸನ್ಮಾನ -ಕಹಳೆ ನ್ಯೂಸ್

ಕಡಬ : ಭಾರತೀಯ ಸೇನೆಯ ಅಗ್ನಿವೀರ್ ಗೆ ಆಯ್ಕೆಯಾಗಿರುವ ಪ್ರಫುಲ್ ಅವರಿಗೆ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ಅಭಿನಂದನೆ ಸಲ್ಲಿಸಿ ಶುಭ ಹಾರೈಸಲಾಯಿತು.
ದೇಶಸೇವೆಯ ಮಹತ್ವಾಕಾಂಕ್ಷೆಯೊಂದಿಗೆ ಭಾರತೀಯ ಸೇನೆಗೆ ಸೇರ್ಪಡೆಯಾಗುತ್ತಿರುವ ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರಕ್ಕೆ ಒಳಪಡುವ ರೆಂಜಿಲಾಡಿ ಗ್ರಾಮದ ಪದ್ಮನಾಭ ಹಾಗೂ ರಜಿತ ದಂಪತಿಗಳ ಪುತ್ರನಾದ ಪ್ರಫುಲ್ ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಪ್ರಫುಲ್ ಅವರನ್ನು ಸನ್ಮಾನಿಸಿ, ದೇಶ ಸೇವೆಯಲ್ಲಿ ಯಶಸ್ಸು ಸಾಧಿಸುವಂತೆ ಹಾರೈಸಲಾಯಿತು.

ಜಾಹೀರಾತು

ಕಾರ್ಯಕ್ರಮದಲ್ಲಿ ಬಿಜೆಪಿ ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಧುಸೂದನ್ ಕೊಂಬಾರು, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ಉಪಾಧ್ಯಕ್ಷರಾದ ಸುಪ್ರೀತ್ ಅಮೈ ಹಾಗೂ ದಿಲೀಪ್ ಉಪ್ಪಳ್ಳಿಕೆ, ಕಾರ್ಯಕಾರಣಿ ಸದಸ್ಯರಾದ ಯತೀಶ್,ಮಾಜಿ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ ನೂಜಿ, ಪಕ್ಷದ ಪ್ರಮುಖರಾದ ಉಮೇಶ್ ಗೌಡ, ವಿನಯಕುಮಾರಿ, ಸಂಘಟನೆಯ ಮುಖಂಡ ಉಮೇಶ್ ಶೆಟ್ಟಿ ಸಾಯಿರಾಮ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು