ಚಾಕುವಿನಿಂದ ಇರಿದು ಹೆಂಡತಿಯಿಂದಲೇ ಗಂಡನ ಕೊಲೆ -ಕಹಳೆ ನ್ಯೂಸ್
ಬೆಂಗಳೂರು: ಚಾಕುವಿನಿಂದ ಇರಿದು ಹೆಂಡತಿಯೇ ಗಂಡನ ಕೊಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದ ಮಲ್ಲತ್ತಹಳ್ಳಿಯಲ್ಲಿ ನಡೆದಿದೆ. ತೌಹಿಬ್ ಪಾಷ ಕೊಲೆಯಾದ ಪತಿ. ಪತ್ನಿ ಸೋಹಾನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಗಲಾಟೆ ನಡೆದು ಕೊಲೆ ಮಾಡಿದ್ದಾರೆ. ಪತ್ನಿ, ಆಕೆಯ ತಾಯಿ, ಮತ್ತು ತಂದೆ ಮೂವರು ಸೇರಿ ಕೊಲೆ ಮಾಡಿದ್ದಾರೆ ಎಂದು ತೌಹಿಬ್ ಪಾಷ ಕುಟುಂಬಸ್ಥರು ಆರೋಪಿಸಿದ್ದಾರೆ....







