ಎನ್.ಎಂ.ಸಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕಿ ಶ್ರೀಮತಿ ರತ್ನಾವತಿ ಡಿ ಅವರಿಗೆ ಸೇವಾ ನಿವೃತ್ತಿ ಮತ್ತು ಬೀಳ್ಕೊಡುಗೆ -ಕಹಳೆ ನ್ಯೂಸ್
ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕಿ ಶ್ರೀಮತಿ ರತ್ನಾವತಿ ಡಿ,ಅವರು ಸುಧೀರ್ಘ 34 ವರ್ಷಗಳ ಸೇವೆಯನ್ನು ಸಲ್ಲಿಸಿ ಮೇ 30ರಂದು ಸೇವಾ ನಿವೃತ್ತಿಯನ್ನು ಹೊಂದಿದ್ದು ಕಾಲೇಜಿನ ಶಿಕ್ಷಕ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರತ್ನಾವತಿಯವರು ದೇವರಗುಂಡ ದಿ. ಅಣ್ಣಕೂಸು ಗೌಡ ಮತ್ತು ದಿ. ಸೀತಮ್ಮ ದಂಪತಿಗಳ ಪುತ್ರಿಯಾಗಿ 21.5.1966 ರಂದು ಜನಿಸಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಅನುದಾನಿತ ಉನ್ನತೀಕರಿಸಿದ ಪ್ರಾಥಮಿಕ ಶಾಲೆ...







