Saturday, June 13, 2026
ಬೆಂಗಳೂರುರಾಜ್ಯಸುದ್ದಿ

ಬೆಂಗಳೂರು ಅಭಿವೃದ್ಧಿ ಖಾತೆ ವಹಿಸಿಕೊಳ್ಳದ ಕೃಷ್ಣ ಬೈರೇಗೌಡ -ಕಹಳೆ ನ್ಯೂಸ್

ಬೆಂಗಳೂರು: ಪ್ರಮಾಣವಚನ ಸ್ವೀಕಾರ ಮಾಡಿ 10 ದಿನ ಕಳೆದರೂ ಸಚಿವ ಕೃಷ್ಣ ಬೈರೇಗೌಡ  ಇನ್ನೂ ಬೆಂಗಳೂರು ಅಭಿವೃದ್ಧಿ  ಖಾತೆ ಅಧಿಕಾರ ವಹಿಸಿಕೊಂಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಖಾತೆ ಜವಾಬ್ದಾರಿ ತೆಗೆದುಕೊಳ್ಳುವಾಗ ಕೆಲ ಸ್ಪಷ್ಟತೆ ಇರಬೇಕು ಎಂದಿದ್ದಾರೆ.
ಖಾತೆ ಅಧಿಕಾರ ವಹಿಸಿಕೊಳ್ಳದ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಖಾತೆ ವಿಚಾರಕ್ಕೆ ಕೆಲವು ಸ್ಪಷ್ಟತೆ ಬೇಕಿದೆ. ಖಾತೆ ಜವಾಬ್ದಾರಿ ತೆಗೆದುಕೊಳ್ಳುವಾಗ ಕೆಲ ಸ್ಪಷ್ಟತೆ ಇರಬೇಕು. ಜವಾಬ್ದಾರಿಗೆ ಸರಿಯಾಗಿ ನಿರ್ವಹಣೆ ಮಾಡಿ ರಿಸಲ್ಟ್ ಕೊಡಬೇಕು. ಸಿಎಂ ಅವರಿಗೆ ಯಾವ ಸ್ಪಷ್ಟತೆ ಇರಬೇಕು ಎಂದು ಮನವರಿಕೆ ಮಾಡಿದ್ದೇನೆ. ಆದಷ್ಟು ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಜಾಹೀರಾತು

ಕರ್ನಾಟಕದ ಕಠಿಣ ಜವಾಬ್ದಾರಿಗಳಲ್ಲಿ ಬೆಂಗಳೂರು ಖಾತೆ ಕೂಡ ಒಂದು. ಸಿಎಂ ಖಾತೆ ಬಗ್ಗೆ ಸ್ಪಷ್ಟತೆ ನೀಡಿದ ನಂತರ ನಾನು ಮುಂದುವರೆಯುತ್ತೇನೆ. ಅಧಿಕಾರ ಒಂದೇ ನೋಡೋದಲ್ಲ, ಮುಂದೆ ನಾನು ಉತ್ತರ ಕೊಡಬೇಕಾಗುತ್ತದೆ. ಸ್ಪಷ್ಟತೆ ಇಲ್ಲದೇ ಕೆಲಸ ಮಾಡಲು ಹೋದರೆ ತೊಂದರೆಯಾಗುತ್ತದೆ. ಸಿಎಂ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಹೈಕಮಾಂಡ್ ನಾಯಕರ ಗಮನದಲ್ಲಿ ಈ ವಿಷಯ ಇದೆ. ಹೈಕಮಾಂಡ್ ಸಹ ಸಿಎಂ ಜೊತೆ ಸಮಾಲೋಚನೆ ಮಾಡಿದ್ದಾರೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು