Monday, June 1, 2026
ಸುದ್ದಿ

ಇರಾನ್ ಮೇಲೆ ಅಮೆರಿಕ ವಾಯುದಾಳಿ : ರೇಡಾರ್ ಕೇಂದ್ರಗಳು ಧ್ವಂಸ – ಕಹಳೆ ನ್ಯೂಸ್

ವಾಷಿಂಗ್ಟನ್: ಅಮೆರಿಕ ವಾರಾಂತ್ಯದಲ್ಲಿ ಇರಾನ್‌ನ ರಾಡಾರ್ ಮತ್ತು ಡ್ರೋನ್ನಿ ಯಂತ್ರಣ ಕೇಂದ್ರಗಳ ಮೇಲೆ ರಕ್ಷಣಾತ್ಮಕ ದಾಳಿ ನಡೆಸಿದೆ. ಇರಾನ್‌ನ ಗೊರುಕ್ ಮತ್ತು ಕ್ವೆಶ್ಮ್ ದ್ವೀಪಗಳಲ್ಲಿರುವ ಕೇಂದ್ರಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್  ತಿಳಿಸಿದೆ.
ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ಎಂಕ್ಯೂ-1 ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ಕೇಂದ್ರ ಕಮಾಂಡ್ ಹೇಳಿದೆ.

ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಕಳೆದ ವಾರವೂ ಅಮೆರಿಕ ಮತ್ತು ಇರಾನ್ ನಡುವೆ ದಾಳಿಗಳು ನಡೆದಿದ್ದವು. ಹೋರ್ಮುಜ್ ಜಲಸಂಧಿ ಸಮೀಪದ ಇರಾನ್ ಡ್ರೋನ್ ಕಾರ್ಯಾಚರಣೆಯನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಅಮೆರಿಕದ ಸೇನಾ ನೆಲೆಯೊಂದನ್ನು ಗುರಿಯಾಗಿಸಿ ದಾಳಿ ನಡೆಸಿತ್ತು.

ಇದೀಗ ಎರಡೂ ದೇಶಗಳ ನಡುವೆ ಕದನ ವಿರಾಮ ವಿಸ್ತರಣೆ ಹಾಗೂ ಹೋರ್ಮುಜ್ ಜಲಸಂಧಿಯನ್ನು ತೆರೆಯುವ ಕುರಿತು ಮಾತುಕತೆಗಳು ನಡೆಯುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.