Friday, June 19, 2026
ಜಿಲ್ಲೆಮುಂಬೈಸುದ್ದಿ

ನೀಟ್‌ ಪರೀಕ್ಷೆಗಾಗಿ ಪೋಕ್ಸೋ ಆರೋಪಿಗೆ ನಾಲ್ಕು ದಿನ ಬೇಲ್‌ -ಕಹಳೆ ನ್ಯೂಸ್

ಮುಂಬೈ: ಪೋಕ್ಸೋ ಪ್ರಕರಣದಲ್ಲಿ  ಜೈಲು ಸೇರಿದ್ದ 18ರ ಯುವಕನಿಗೆ ಜೂ.21 ರಂದು ನಿಗದಿಯಾಗಿರುವ ನೀಟ್ ಮರು ಪರೀಕ್ಷೆಗೆ  ಹಾಜರಾಗಲು ಮುಂಬೈನ ವಿಶೇಷ ಪೋಕ್ಸೋ ನ್ಯಾಯಾಲಯ ನಾಲ್ಕು ದಿನಗಳ ತಾತ್ಕಾಲಿಕ ಜಾಮೀನು ನೀಡಿದೆ.
ಆರೋಪಿಯ ಜಾಮೀನು ಅರ್ಜಿಗೆ ಸಂತ್ರಸ್ತೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಇದರಿಂದ ಜಾಮೀನಿನಲ್ಲಿದ್ದಾಗ ಸಂತ್ರಸ್ತೆಯ ಕುಟುಂಬಕ್ಕೆ ಮಾನಹಾನಿ, ಬೆದರಿಕೆ ಹಾಕುವುದಿಲ್ಲ ಎಂಬ ಭರವಸೆ ಮೇಲೆ ವಿಶೇಷ ನ್ಯಾ.ಎಸ್ ಆರ್ ಶರ್ಮಾ ಅವರಿದ್ದ ಪೀಠ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆದೇಶದಲ್ಲಿ 50,000 ರೂ.ಗಳ ಬಾಂಡ್ ಮತ್ತು ಅದೇ ಮೊತ್ತದ ಶೂರಿಟಿ ನೀಡುವಂತೆ ಉಲ್ಲೇಖಿಸಲಾಗಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು