ಕಾನ್‌ಸ್ಟೆಬಲ್ ಪ್ರೇಯಸಿಯಿಂದ ರಾದ್ಧಾಂತ; ಪೊಲೀಸ್ ಮನೆಗೆ ನುಗ್ಗಿ ಆತನ ಪತ್ನಿ, ಮಗನಿಗೆ ಚಾಕುವಿನಿಂದ ಇರಿದು ಹತ್ಯೆ -ಕಹಳೆ ನ್ಯೂಸ್
ರಾಯ್ಪುರ: ಛತ್ತೀಸಗಢದಲ್ಲಿ 25 ವರ್ಷದ ಮಹಿಳೆಯೊಬ್ಬಳು ತಾನು ಸಂಬಂಧ ಹೊಂದಿದ್ದ ಕಾನ್‌ಸ್ಟೆಬಲ್ ಮನೆಗೆ ನುಗ್ಗಿ ಆತನ ಪತ್ನಿ ಮತ್ತು ಮೂವರು ಮಕ್ಕಳಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಆರೋಪಿ ಸರೋಜಿನಿ ಭಾರದ್ವಾಜ್ ತನ್ನ ಕುಟುಂಬದ ಊರಿಗೆ ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಳು. ಬಳಿಕ ದುರ್ಗದಲ್ಲಿರುವ ಕಾನ್‌ಸ್ಟೆಬಲ್ ಲಲಿತೇಶ್ ಯಾದವ್ ಅವರ ಫ್ಲಾಟ್‌ಗೆ ಹೋದಾಗ ಈ ಘಟನೆ ನಡೆದಿದೆ. ಸರೋಜಿನಿ ಮೊದಲು ರೀನಾ ಯಾದವ್ ಜೊತೆಗೆ ಜಗಳ ತೆಗೆದಳು. ಈ...







