Saturday, April 25, 2026
ಜಿಲ್ಲೆರಾಜ್ಯಸುದ್ದಿ

ಧರ್ಮರಕ್ಷಣೆಗಾಗಿ ಯುವಕರನ್ನು ಕಾರ್ಯಗತಗೊಳಿಸಲು ಹಿಂದೂ ಜನಜಾಗೃತಿ ಸಮಿತಿ ಸಜ್ಜು :ರಾಜ್ಯ ಮಟ್ಟದ ಉಚಿತ ಆನ್‌ಲೈನ್ ಎಡಿಟಿಂಗ್ ಕಾರ್ಯಾಗಾರಗಳ ಆಯೋಜನೆ !-ಕಹಳೆ ನ್ಯೂಸ್

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಮನೋರಂಜನೆಗೆ ಸೀಮಿತವಾಗದೆ, ಅವು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಪ್ರಬಲ ಶಸ್ತ್ರವಾಗಬೇಕು ಎಂಬ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಯುವಕರಿಗಾಗಿ ರಾಜ್ಯ ಮಟ್ಟದ ಮೂರು ವಿಭಿನ್ನ ಆನ್‌ಲೈನ್ ತರಬೇತಿ ಕಾರ್ಯಾಗಾರಗಳನ್ನು (Workshops) ಆಯೋಜಿಸಲಾಗಿದೆ. ಯುವಜನತೆ ತಮ್ಮಲ್ಲಿರುವ ತಾಂತ್ರಿಕ ಕೌಶಲ್ಯವನ್ನು ನಮ್ಮ ಉನ್ನತ ಸಂಸ್ಕೃತಿಯ ಪ್ರಸಾರಕ್ಕಾಗಿ ಮತ್ತು ಧರ್ಮದ ಮೇಲಾಗುವ ಆಘಾತಗಳನ್ನು ತಡೆಯಲು ‘ಸೋಶಿಯಲ್ ಮೀಡಿಯಾ ವಾರಿಯರ್’ ಆಗಿ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸುವುದು ಈ ಶಿಬಿರಗಳ ಮುಖ್ಯ ಗುರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

7 ಅಕ್ಟೋಬರ್ 2002 ರಂದು ಸ್ಥಾಪನೆಯಾದ ಹಿಂದೂ ಜನಜಾಗೃತಿ ಸಮಿತಿಯು ಧರ್ಮ ಶಿಕ್ಷಣ, ಧರ್ಮ ಜಾಗೃತಿ, ಸಂಘಟನೆ, ರಾಷ್ಟ್ರ ಮತ್ತು ಧರ್ಮ ರಕ್ಷಣೆ ಎಂಬ ಪಂಚಸೂತ್ರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇವತೆಗಳ ವಿಡಂಬನೆ ತಡೆ, ಲವ್ ಜಿಹಾದ್ ಮತ್ತು ಹಲಾಲ್ ಜಿಹಾದ್‌ನಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಮಿತಿಯು, ರಾಷ್ಟ್ರಧ್ವಜದ ಗೌರವ ಮತ್ತು ಐತಿಹಾಸಿಕ ಕೋಟೆಗಳ ಸಂರಕ್ಷಣೆಗಾಗಿ ನಿರಂತರ ಹೋರಾಡುತ್ತಿದೆ.

*ಆಸಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಳಗಿನ ಶಿಬಿರಗಳಿಗೆ ನೋಂದಾಯಿಸಿಕೊಳ್ಳಬಹುದು :*
1. ಇಮೇಜ್ ಎಡಿಟಿಂಗ್ (Canva App ಮೂಲಕ): ಏಪ್ರಿಲ್ 25 ಮತ್ತು 26, 2026.
2. ಲ್ಯಾಪ್ಟಾಪ್ ಪೋಸ್ಟರ್ ಎಡಿಟಿಂಗ್ : ಏಪ್ರಿಲ್ 30 ಮತ್ತು ಮೇ 1, 2026.
3. ವಿಡಿಯೋ ಎಡಿಟಿಂಗ್ (VN App ಮೂಲಕ): ಮೇ 2 ಮತ್ತು 3, 2026.

*ನೋಂದಣಿ ಮಾಹಿತಿ :*
ಈ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ 18 ರಿಂದ 35 ವರ್ಷದೊಳಗಿನ ಯುವಕರು ಇಲ್ಲಿ ನೀಡಲಾದ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಗೂಗಲ್ ಫಾರ್ಮ್ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು. ರಾಷ್ಟ್ರ ಮತ್ತು ಧರ್ಮದ ಸೇವೆಯಲ್ಲಿ ಆಸಕ್ತಿ ಹೊಂದಿರುವ ಯುವಕರು ಈ ತಾಂತ್ರಿಕ ಶಿಬಿರದ ಲಾಭ ಪಡೆಯಬೇಕೆಂದು ಸಮಿತಿಯು ಕೋರಿದೆ.

*ತಮ್ಮ ವಿಶ್ವಾಸಿ,*
*ಶ್ರೀ. ಗುರುಪ್ರಸಾದ್ ಗೌಡ,* ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಸಂಪರ್ಕ : 9343017001