Sunday, June 14, 2026
ಜಿಲ್ಲೆದಕ್ಷಿಣ ಕನ್ನಡಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆದಿಲ ಒಕ್ಕೂಟ ತ್ರೈ ಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ -ಕಹಳೆ ನ್ಯೂಸ್

ಮಾಣಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆದಿಲ ಒಕ್ಕೂಟ ತ್ರೈ ಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಒಕ್ಕೂಟ ಅಧ್ಯಕ್ಷರಾದ ಮೀನಾಕ್ಷಿ ರವರ ಅಧ್ಯಕ್ಷತೆ ಯಲ್ಲಿ ಶ್ರೀ ದೇವಿ ಭಜನಾ ಮಂದಿರ ಕೆದಿಲದಲ್ಲಿ ಜೂನ್ 14 ಆದಿತ್ಯವಾರ ಜರಗಿತು.

ಜಾಹೀರಾತು

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ವಿಚಕ್ಷಣಾಧಿಕಾರಿ ಕವಿತಾ ವಸಂತ ಸಂಸ್ಕಾರ, ಸಂಸ್ಕೃತಿ ಬಗ್ಗೆ ಮತ್ತು ಮಹಿಳೆರ ಜವಾಬ್ದಾರಿ ಬಗ್ಗೆ,ಹಾಗೂ ಯೋಜನೆಯ ವಿವಿಧ ಕಾರ್ಯಕ್ರಮದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು,

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸ್ವಾತಿ, ಉಪಾಧ್ಯಕ್ಷರಾಗಿ ರಾಜು, ಕಾರ್ಯದರ್ಶಿಯಾಗಿ ಸಾಜಿದ, ಜೊತೆಕಾರ್ಯದರ್ಶಿಯಾಗಿ ಅಸ್ವಿನಿ, ಕೋಶಾಧಿಕಾರಿಯಾಗಿ ಗಂಗಾಧರ್ ಆಯ್ಕೆಯಾದರು.
ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ದೀಪ, ಒಕ್ಕೂಟ ಸೇವಾಪ್ರತಿನಿಧಿ ಜಯಂತಿ,
ಪದಾಧಿಕಾರಿಗಳಾದ ಸುಂದರ, ಪ್ರತಿಭಾ, ಜನಾರ್ಧನ್, ಚಂದ್ರಶೇಖರ ಉಪಸ್ಥಿತರಿದ್ದರು,
ಕಾರ್ಯಕ್ರಮ ಜವಾಬ್ದಾರಿ ಪ್ರಗತಿ ಹಾಗೂ ವನದುರ್ಗ ಸಂಘದ ಸದಸ್ಯರು ವಹಿಸಿ ರೇವತಿ ಸ್ವಾಗತಿಸಿ, ರತ್ನವತಿ ವಂದಿಸಿದರು.