ಕೇರಳದಲ್ಲಿ ವರುಣನ ಅಬ್ಬರಕ್ಕೆ 6 ಜನರ ದುರ್ಮರಣ; 8 ಜಿಲ್ಲೆಗಳಿಗೆ ರೆಡ್ ಅಲರ್ಟ್ – ಕಹಳೆ ನ್ಯೂಸ್
ತಿರುವನಂತಪುರಂ: ಕೇರಳದಲ್ಲಿ (Kerala) ಮಳೆ ಅಬ್ಬರ ಶುರುವಾಗಿದ್ದು, ಕಾವೇರಿಗೆ ಮತ್ತಷ್ಟು ನೀರು ಬರುವ ಸಾಧ್ಯತೆ ಇದೆ. ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ವಯನಾಡು, ಶಬರಿಮಲೆ, ಪಂಪಾ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ. ತೆಕ್ಕೇಕರದಲ್ಲಿ ಮನೆ ಕುಸಿದು ಅಮ್ಮ-ಮಗ ಸಾವನ್ನಪ್ಪಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ರಾನ್ನಿ ನಗರದಲ್ಲಿ ಜಲಾವೃತವಾಗಿದೆ. ಇಡುಕ್ಕಿ (Idukki) ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ...







