Monday, June 15, 2026
ಕೇರಳಸುದ್ದಿ

ʻಪ್ರಿಯದರ್ಶಿನಿʼ ಯೋಜನೆ ಉದ್ಘಾಟನೆ ವೇಳೆ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ- ಕಹಳೆ ನ್ಯೂಸ್

ತಿರುವನಂತಪುರಂ: ಕೇರಳದ ಕೊಲ್ಲಂನಲ್ಲಿ ʻಪ್ರಿಯದರ್ಶಿನಿʼ ಉಚಿತ ಬಸ್‌ ಪ್ರಯಾಣ ಯೋಜನೆ ಉದ್ಘಾಟನೆ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬಿಂದು ಕೃಷ್ಣ ಅವರ ತಲೆಯ ಮೇಲೆ ಬಿಸಿ ಪಾಯಸ ಬಿದ್ದ ಆಘಾತಕಾರಿ ಘಟನೆ ನಡೆದಿದೆ.

ಜಾಹೀರಾತು

ತಕ್ಷಣ ಅಲ್ಲಿದ್ದ ಜನ ಟವೆಲ್‌ ಹಾಗೂ ಶಾಲು ಬಳಸಿ ಸಚಿವೆಯ ತಲೆ ಹಾಗೂ ಮುಖವನ್ನು ಒರೆಸಿದ್ದಾರೆ. ಬಿಸಿಯ ನೋವಿನ ನಡುವೆಯೂ ಸಚಿವೆ ಶಾಂತಿಯಿಂದ ಇದ್ದರು. ಅಲ್ಲದೇ ಕಾರ್ಯಕ್ರಮ ಸ್ಥಗಿತಗೊಳಿಸಲು ನಿರಾಕರಿಸಿದರು. ಬಸ್‌ನಲ್ಲೇ ಇದ್ದು, ಚಿನ್ನಕ್ಕಡ ತಲುಪುವವರೆಗೆ ಪ್ರಯಾಣಿಸಿ, ನಂತರ ಹಿಂತಿರುಗಿದರು. ಈ ಘಟನೆಯಿಂದ ಬಸ್‌ನಲ್ಲಿದ್ದವರು ಕ್ಷಣಕಾಲ ಆಘಾತಕ್ಕೊಳಗಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು