ಶಬರಿಮಲೆ ಯಾತ್ರೆ ಆರಂಭ: ಮೂಗಿನೊಳಗೆ ನೀರು ಹೋಗದಂತೆ ಎಚ್ಚರವಹಿಸಲು ಸರ್ಕಾರದ ಸೂಚನೆ- ಕಹಳೆ ನ್ಯೂಸ್
ಪತ್ತನಂತಿಟ್ಟ: ಕೇರಳದಲ್ಲಿ ಕಳೆದ ಕೆಲ ತಿಂಗಳುಗಳಿಂದ ಪತ್ತೆಯಾಗುತ್ತಿರುವ 'ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್' ಎಂಬ ಮಿದುಳು ಜ್ವರ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಶಬರಿಮಲೆಯ ವಾರ್ಷಿಕ ಯಾತ್ರೆ ಕೈಗೊಳ್ಳುವವರಿಗೆ ಸೂಚನೆ ನೀಡಿದ್ದು, ಮೂಗಿನೊಳಗೆ ನೀರು ಹೋಗದಂತೆ ಎಚ್ಚರ ವಹಿಸುವಂತೆ ಹೇಳಿದೆ. ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ತಮ್ಮ ದಾಖಲೆ ಹಾಗೂ ಔಷಧಗಳನ್ನು ಕೊಂಡೊಯ್ಯಬೇಕು. ಯಾತ್ರೆಯ ಸಂದರ್ಭದಲ್ಲಿ ನಿಯಮಿತ ಔಷಧಗಳನ್ನು ನಿಲ್ಲಸಬಾರದು. ಶಬರಿಮಲೆಗೆ ನಡೆಯುವಂತ ಸಂದರ್ಭದಲ್ಲಿ ಒತ್ತಡ ನಿರ್ವಹಣೆಯಾಗಿ ನಡಿಗೆಯಂತ ಲಘು ವ್ಯಾಯಾಮ ಮಾಡುವಂತೆಯೂ ಸಲಹೆ...







