Sunday, July 26, 2026
ಸುದ್ದಿ

ಧರ್ಮಸ್ಥಳದಲ್ಲಿ 20ನೇ ವರ್ಷದ ಭಜನಾ ಸಮಾರೋಪ: ಪ್ರಮುಖ ಅತಿಥಿಯಾಗಿ ನಟ ಪವರ್ ಸ್ಟಾರ್ – ಕಹಳೆ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದ 20ನೇ ವರ್ಷದ ಭಜನಾ ಸಮಾರೋಪ ಸಮಾರಂಭದಲ್ಲಿ ನಟ ಪುನೀತ್ ರಾಜ್‌ಕುಮಾರ್ ಭಾಗಿಯಾಗಿದ್ರು. ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಏಳು ದಿನಗಳ ಕಾಲ ಈ ಕಾರ್ಯಕ್ರಮ ನಡೆದಿತ್ತು.

ನಿನ್ನೆ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಮೊದಲು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 300 ಭಜನಾ ತಂಡಗಳು ಹಾಗೂ 3,000ಕ್ಕೂ ಅಧಿಕ ಭಜನಾ ಪಟುಗಳಿಂದ ಶೋಭಾಯಾತ್ರೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಅಮೃತವರ್ಷಿನಿ ಸಭಾಭವನದಲ್ಲಿ ಭಜನೆಯೊಂದಿಗೆ ನೃತ್ಯ ಭಜನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಸಮಾರೋಪ ಕರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟ ಪವರ್ ಸ್ಟಾರ್ ಪುನೀತ್ ಸ್ಟಾರ್ ಕುಮಾರ್ ಪ್ರಮುಖ ಆಕರ್ಷಣೆಯಾಗಿದ್ರು. ಹಾಗೂ ಭಜನಾ ತಂಡಗಳ ಜೊತೆಗೆ ರಾಘವೇಂದ್ರ ಸ್ವಾಮಿಗಳ ಕೀರ್ತನೆಯನ್ನು ಹಾಡುವ ಮೂಲಕ ಮನರಂಜಿಸಿದ್ರು.

ಈ ವೇಳೆ ಧರ್ಮಸ್ಥಳ ಧರ್ಮಾದಿಕಾರಿ ಡಾ,ವೀರೇಂದ್ರ ಹೆಗ್ಗಡೆ, ಕನಕನಗಿರಿ ಮೆಲೆಯೂರು ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಮಾಣಿಲ ಶ್ರೀಧಾಮ ಮಹಾಲಕ್ಷ್ಮಿ ಕ್ಷೇತ್ರದ ಮೋಹನ್ ದಾಸ್ ಸ್ವಾಮೀಜಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.