Sunday, September 20, 2026
ಬೆಂಗಳೂರುರಾಜ್ಯಸುದ್ದಿ

ಪೊಲೀಸ್ ಠಾಣೆ ಮುಂಭಾಗ ಐಷಾರಾಮಿ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ – ಕಹಳೆ ನ್ಯೂಸ್

ಬೆಂಗಳೂರು: ಐಷಾರಾಮಿ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಕೋರಮಂಗಲ  ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆದಿದೆ.

ಜಾಹೀರಾತು
ರಾತ್ರಿ ಒಂದು ಗಂಟೆ ಸುಮಾರಿಗೆ ಠಾಣೆ ಮುಂಭಾಗ ಫಾಸ್ಟ್ ಫುಡ್ ಹೋಟೆಲ್ ಬಳಿ ಕಾರು ನಿಂತಿದೆ. ಬೆಳಗ್ಗೆ ನೋಡಿದಾಗ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರ ಪರಿಶೀಲನೆ ವೇಳೆ ಮೃತಪಟ್ಟ ವ್ಯಕ್ತಿ ಅಕ್ಬರ್ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೇಲ್ನೋಟಕ್ಕೆ ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಸೋಕೋ ಟೀಂ ಹಾಗೂ ಕೋರಮಂಗಲ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದ್ದು, ಮೃತಪಟ್ಟ ಅಕ್ಬರ್ ಯಾರು? ಆತನ ಹಿನ್ನಲೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.