Sunday, September 20, 2026
ಸುದ್ದಿ

ವಿಟ್ಲ ಶ್ರೀ ಭಗವತೀ ಕ್ಷೇತ್ರದಲ್ಲಿ ಸಿಂಹಮಾಸದ ವಿಶೇಷ ಪೂಜೆಯ ಸಂದರ್ಭದಲ್ಲಿ ವೈಷ್ಣವೀ ನಾಟ್ಯಾಲಯ (ರಿ) ಪ್ರತ್ತೂರು ಇದರ ರಜತ ನೃತ್ಯಾಂತರ್ಯಾನದ ಅಂಗವಾಗಿ ವಿಟ್ಲ ಶಾಖೆಯ ವಿದ್ಯಾರ್ಥಿಗಳಿಂದ ನಡೆದ ನೃತ್ಯಾರ್ಪಣಂ ಕಾರ್ಯಕ್ರಮ – ಕಹಳೆ ನ್ಯೂಸ್

ವಿಟ್ಲ ಶ್ರೀ ಭಗವತೀ ಕ್ಷೇತ್ರದಲ್ಲಿ ಸಿಂಹಮಾಸದ ವಿಶೇಷ ಪೂಜೆಯ ಸಂದರ್ಭದಲ್ಲಿ ವೈಷ್ಣವೀ ನಾಟ್ಯಾಲಯ (ರಿ) ಪ್ರತ್ತೂರು ಇದರ ರಜತ ನೃತ್ಯಾಂತರ್ಯಾನದ ಅಂಗವಾಗಿ ವಿಟ್ಲ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ವೈಷ್ಣವೀ ರಜತ ನೃತ್ಯಾಂತರ್ಯಾನದ ಗೌರವಾಧ್ಯಕ್ಷರಾದ ಶ್ರೀಕೇಶವ ಪ್ರಸಾದ್ ಮುಳಿಯರವರು ಉದ್ಘಾಟಿಸಿದರು. ಭಗವತೀ ದೇವಸ್ಥಾನದ ವ್ಯವಸ್ಥಾಪಕರಾಗಿರುವ ಶ್ರೀ ಕೇಶವ ಆರ್.ವಿ.ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸುಭಾಷ್ ಚಂದ್ರ ನಾಯಕ್ ಉದ್ಯಮಿಗಳು ಹಾಗೂ ಸಂಗೀತ ಗುರುಗಳು ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ನಾಟ್ಯಾಲಯದ ವತಿಯಿಂದ ಕೇಶವ್ ಆರ್.ವಿ ; ಪಾರ್ವತಿ ಗಣೇಶ್ ಭಟ್, ಹಾಗೂ ಶ್ರೀಮತಿ ಲಲಿತಾರವರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.
ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ‘ಹಾಡುಗಾರಿಕೆಯಲ್ಲಿ ವಿದ್ವಾನ್ ಶ್ರೀ ವಿಷ್ಣು ಭಟ್ ವೆಳಿಕ್ಕೋತ್ ಮತ್ತು ವಸಂತ ಕುಮಾರ ಗೋಸಾಡ, ಮೃದಂಗದಲ್ಲಿ ಶ್ರೀ ರಾಜೀವ ಗೋಪಾಲ ವೆಳ್ಳಿಕ್ಕೋತ್ ‘ಕೊಳಲಿನಲ್ಲಿ ಶ್ರೀ ರಾಜಗೋಪಾಲ ಕಾಞಂಗಾಡ್ ಮತ್ತು ರಿದಂ ನಲ್ಲಿ ಶಶಾಂಕ ಬಿ.ಸಿ.ರೋಡು ಸಹಕರಿಸಿದರು.
ಶ್ರೀಮತಿ ತುಳಸಿ ವಿಟ್ಲ ರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಚಂಪಾ ವಿಟ್ಲರವರು ವಂದಿಸಿದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು