ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿದೆ.. ರಘುನಾಥ ಸೋಮಯಾಜಿ – ಕಹಳೆ ನ್ಯೂಸ್

ಬಂಟ್ವಾಳ : ವೀರೇಂದ್ರ ಹೆಗ್ಡೆ ಅವರ ದೂರದೃಷ್ಟಿಯ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿದೆ, ಸರಕಾರಗಳು ಮಾಡದಂತ ಕೆಲಸಗಳನ್ನು ತನ್ನ ಗ್ರಾಮಭಿವೃದ್ಧಿ ಯೋಜನೆ ಸಂಸ್ಥೆ ಮೂಲಕ ಕಾರ್ಯರೂಪಕ್ಕೆ ತಂದು ಬಡವರ ಪಾಲಿನ ಆಶಾಕಿರಣರಾಗಿದ್ದಾರೆ. ಎಂದು ಶ್ರೀ ಭಯಂಕೇಶ್ವರ ದೇವಸ್ಥಾನ ನರಿಕೊಂಬುವಿನ ಆಡಳಿತ ಮೊಕ್ತೇಸರರಾದ ರಘುನಾಥ ಸೋಮಯಾಜಿ ಹೇಳಿದರು.
ಅವರು ಆಗಸ್ಟ್ 13 ರ ಗುರುವಾರ ನರಿಕೊಂಬು ಶ್ರೀ ಭಯಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ತರಬೇತಿ ಕಾರ್ಯಗಾರವನ್ನು ರವರು ಉದ್ಘಾಟಿಸಿ ಮಾತನಾಡಿದರು.
ಶೌರ್ಯ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ತಂಡದ ಕೆಲಸವು ಸೇವಾ ಮನೋಭಾವದಿಂದ ಕೂಡಿದ್ದು,ಯಾವುದೇ ಕೆಲಸಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಸೇವೆಗೆ ಸಿದ್ದ ಎನ್ನುವ ಭಾವನೆಯಿಂದ ದುಡಿಯುತ್ತಿರುವ ಸದಸ್ಯರ ಶಕ್ತಿಯನ್ನು ಮೆಚ್ಚುವಂತದ್ದು,. ತಾವು ಮಾಡುವ ಈ ಸೇವೆಯು ದೇಶಸೇವೆಗೆ ಸಮಾನವಾದದು ಎಂದು ಏನ್ ಡಿ ಆರ್ ಎಫ್ ಕಮಾಂಡರ್ ಶಾಂತಿಲಾಲ್ ಜಟಿಯಾ ಹೇಳಿದರು.
ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ತಂಡವು ರಾಜ್ಯದಲ್ಲಿ ಉಂಟಾಗುವ ವಿಪತ್ತಿನ ಸಂದರ್ಭದಲ್ಲಿ ತಮ್ಮದೇ ಸೇವೆ ನೀಡುತ್ತಾ ಬಂದಿದೆ,ಆಪತ್ತಿನ ಸಂದರ್ಭದಲ್ಲಿ ಆತ್ಮಸ್ಥೈರ್ಯದಿಂದ ಸ್ಪಂದಿಸಿ, ಸಂಕಷ್ಟದಲ್ಲಿರುವವರ ಜೀವ–ಜೀವನಕ್ಕೆ ನೆರವಾಗುವ ಸ್ವಯಂಸೇವಕರ ಸಂಘಟಿತ ಸೇವೆಯೇ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ,ಶ್ರೀ ಕ್ಷೇತ್ರ ಧರ್ಮಸ್ಥಳ ಕಲಿಯುಗದ ಕಾಮಧೇನು ಕಲ್ಪವೃಕ್ಷದಂತೆ ತನ್ನ ಸೇವೆಯನ್ನು ನೀಡುತ್ತಾ ಬಂದಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ, ಶೌರ್ಯ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ, ತಾಲೂಕು ಶೌರ್ಯ ಸಮಿತಿಯ ಮಾಸ್ಟರ್ ಕೃಷ್ಣಪ್ಪ ಕುಲಾಲ್ ,ಕ್ಯಾಪ್ಟನ್ ಪ್ರಕಾಶ್, ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಸದಾನಂದ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಬಳಿಕ ನೇತ್ರಾವತಿ ನದಿಯ ತಟದಲ್ಲಿ ಬಂಟ್ವಾಳ ತಾಲೂಕಿನ 90 ಶೌರ್ಯ ಸ್ವಯಂ ಸೇವಕರಿಗೆ ಪ್ರಾತ್ಯಕ್ಷಿಕೆ ಮೂಲಕ ವಿಪತ್ತಿನಲ್ಲಿ ಪ್ರಥಮ ಸ್ಪಂದನೆ, ಈಜುವಿಕೆ , ಪ್ರವಾಹ ಕುರಿತು ಅಣಕು ಪ್ರದರ್ಶನ ಮತ್ತು ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ನೂತನ ಶೌರ್ಯ ಸಮಿತಿಯ ತಾಲೂಕು ಮಾಸ್ಟರ್ ಹಾಗೂ ಕ್ಯಾಪ್ಟನ್ ಆಯ್ಕೆ ಮಾಡಲಾಯಿತು .ಬಂಟ್ವಾಳ ಶೌರ್ಯ ಸಮಿತಿಯ ಮಾಸ್ಟರ್ ಆಗಿ ಪ್ರವೀಣ್ ಕಾಡಬೆಟ್ಟು, ಕ್ಯಾಪ್ಟನ್ ಆಗಿ ಜಗದೀಶ್ ಆಚಾರ್ಯ ಆಯ್ಕೆಯಾದರು.
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು, ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಕೆ ಕಾರ್ಯಕ್ರಮವನ್ನು ನಿರ್ವಹಿಸಿದರು.











