ಪ್ರಜಾಪ್ರಭುತ್ವ ದಲ್ಲಿ ಕಾನೂನು ಚೌಕಟ್ಟಿನೊಳಗೆ ನ್ಯಾಯ ಮತ್ತು ಸಮಾನತೆ ಯಿಂದ ಸರಕಾರಿ ಕೆಲಸ ಮಾಡಿದಾಗ ಗೌರವ ತಾನಾಗಿ ಬರುತ್ತದೆ – ಕಾಪು ಪೊಲೀಸ್ ನಿವೃತ್ತ ನಿರೀಕ್ಷಕ ಅಜಮತ್ ಆಲಿ -ಕಹಳೆ ನ್ಯೂಸ್

ಸಾರ್ವಜನಿಕ ಸೇವೆಯಲ್ಲಿರುವ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗೃಹರಕ್ಷಕದಳದ ಸಿಬಂಧಿಗಳ ಸೇವೆಯನ್ನು ನಾಗರಿಕರು ಗುರುತಿಸುವ ಗೌರವಿಸುವ ಕಾರ್ಯ ನಿಜಕ್ಕೂ ಇಲಾಖೆಗೆ ಹೆಮ್ಮೆ ತರುವಂತಹುದಾಗಿದೆ. ಕಾನೂನು ಚೌಕಟ್ಟಿನೊಳಗೆ ಸಮಾಜದೊಂದಿಗೆ ಜನಸ್ನೇಹಿಯಾಗಿ ಸರಕಾರಿ ಸಿಬಂಧಿಗಳು ಕೆಲಸ ಮಾಡಿದಾಗ ಮಾತ್ರ ಇಂತಹ ಗೌರವಗಳು ದೊರೆಯಲು ಸಾಧ್ಯ ಎಂದು ಕಾಪು ಪೊಲೀಸ್ ವೃತ್ತನಿರೀಕ್ಷಕ ಅಜಮತ್ ಆಲಿ ತಿಳಿಸಿದ್ದಾರೆ.
ಕಟಪಾಡಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ, ಕಟಪಾಡಿಯ ವಿವಿಧ ಸಂಘ ಸಂಸ್ಥೆಗಳು ಮತ್ತು ಸಮಸ್ತ ನಾಗರಿಕರ ಪರವಾಗಿ, ಕಟಪಾಡಿ ಹೊರಠಾಣೆಯಲ್ಲಿ ಉಪಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿರುವ ಎಎಸ್‌ಐ ದಯಾನಂದ್ ಅವರ ಬೀಳ್ಕೊಡುಗೆ ಮತ್ತು ನಾಗರಿಕ ಸನ್ಮಾನ ಸಮಾರಂಭದಲ್ಲಿ ಬುಧವಾರ ಭಾಗವಹಿಸಿ ಅವರು ಮಾತನಾಡಿದರು.
ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ ಸತ್ಯೇಂದ್ರ ಪೈ ಮಾತನಾಡಿ, ಕಟಪಾಡಿಯ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ನಲ್ಲಿ ಕಳೆದ ಕೆಲವಾರು ವರ್ಷಗಳಿಂದ ಸುಗಮ ವಾಹನ ಸಂಚಾರ, ಸಾರ್ವಜನಿಕ ಸಂಚಾರ ನಿರ್ವಹಿಸುವಲ್ಲಿ ಕಟಪಾಡಿ ಹೊರಠಾಣಾ ಪೊಲೀಸರ ಕೊಡುಗೆ ಅನನ್ಯವಾಗಿದೆ. ಪಿಎಸ್‌ಐ ದಯಾನಂದ್ ಅವರ ನೇತೃತ್ವದ ತಂಡವು ಈ ಭಾಗದಲ್ಲಿ ಅನೇಕ ಅಪಘಾತಗಳನ್ನು ತಡೆಗಟ್ಟುವ ಮೂಲಕ ಕಟಪಾಡಿ ನಾಗರಿಕರಿಗೆ ನೆರವಾಗಿದ್ದಾರೆ ಎಂದರು.
ಕಟಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಟಪಾಡಿಯಲ್ಲಿ ಸೇವೆ ಸಲ್ಲಿಸಿರುವ ಗ್ರಾಮ ಪಂಚಾಯಿತಿ ಲೆಕ್ಕಸಹಾಯಕ ವಿಜಯ್ ಉದ್ಯಾವರ, ಏಣಗುಡ್ಡೆ ಗ್ರಾಮದ ನಿವೃತ್ತ ಗ್ರಾಮ ಸಹಾಯಕ ಸದನಂದ ಎಸ್ ಬಂಗೇರ, ಮಲ್ಪೆ ಪೊಲೀಸ್ ಠಾಣಾ ಎಎಸ್‌ಐ ರುಕ್ಮಯಾ, ಉಡುಪಿ ಸಂಚಾರಿ ಪೊಲೀಸ್ ಠಾಣಾ ಹೆಡ್ ಕಾನ್‌ಸ್ಟೇಬಲ್ ಮೋಹನ್ ಚಂದ್ರ, ಗೃಹರಕ್ಷಕ ದಳದ ಸಿಬ್ಬಂದಿಗಳಾದ ಲಕ್ಷ್ಮೀನಾರಾಯಣ ರಾವ್, ಸೋಮನಾಥ ಸೇರ್ವೇಗಾರ್, ಪುಷ್ಪಾ ದೇವಾಡಿಗ, ಲಕ್ಷ್ಮಿ ಸಾಲ್ಯಾನ್ , ಕಾಮಿನಿ ಅವರನ್ನು ಸನ್ಮಾನಿಸಲಾಯಿತು.
ಕಾಪು ಪೊಲೀಸ್ ಠಾಣಾಧಿಕಾರಿ ತೇಜಸ್ವಿ ಐ, ಪ್ರೊಬೆಷನರಿ ಎಸ್‌ಐ ಮಹಮ್ಮದ್ ಶಿಫಾಜ್, ಕಟಪಾಡಿಯ ವೈದ್ಯರಾದ ಡಾ.ಯು.ಕೆ.ಶೆಟ್ಟಿ, ಡಾ.ಎ.ರವೀಂದ್ರನಾಥ ಶೆಟ್ಟಿ, ಕಲಾವತಿ ದಯಾನಂದ್, ವೈಶಾಲಿ ರುಕ್ಮಯ, ರವಿಕಲಾ, ಗ್ರಾಮ ಕರಣಿಕ ಡೇನಿಯಲ್ ಡೊಮ್ನಿಕ್ ಡಿಸೋಜಾ, ಕಟಪಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭಾಕರ್ ಪಾಲನ್, ಕಟಪಾಡಿ ವರ್ತಕರ ಸಂಘದ ಅಧ್ಯಕ್ಷ ದುಗ್ಗಪ್ಪ ಜಿ ಬಂಗೇರ, ದೇವಾಡಿಗರ ಸಂಘದ ಅಧ್ಯಕ್ಷ ಪ್ರಭಾಕರ್ ಶೇರಿಗಾರ್, ಅಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷ ಗಣೇಶ್ ಕುಮಾರ್ ಮಟ್ಟು, ಕಾರ್ಯದರ್ಶಿ ಹನೀಫ್, ಕಾರು ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ರಮೇಶ್ ಕೋಟ್ಯಾನ್, ಶ್ರೀಗುರು ಮಹಿಳಾ ಬಳಗದ ಅಧ್ಯಕ್ಷೆ ಆಶಾ ಅಂಚನ್, ಬಂಟರ ಸಂಘದ ಅಧ್ಯಕ್ಷ ದಯಾನಂದ್ ಶೆಟ್ಟಿ, ಕಟಪಾಡಿ ಜೆಸಿಐ ಉಪಾಧ್ಯಕ್ಷ ಕಾರ್ತಿಕ್ ಡಿ, ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಜಾನ್ ಅಮ್ಮಣ್ಣ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ಕಾಮರಾಜ್ ಸುವರ್ಣ, ಕಟಪಾಡಿ ಹಾಲು ಉತ್ಪಾದಕರÀ ಸಂಘದ ಅಧ್ಯಕ್ಷ ಅಶೋಕ್ ರಾವ್, ಮಹೇಶ್ ಎನ್. ಅಂಚನ್, ಸುಭಾಸ್ ಬಲ್ಲಾಳ್, ಹರೀಶ್ಚಂದ್ರ ಕಟಪಾಡಿ, ಮಹಮ್ಮದ್ ನಯೀಮ್ ಉಪಸ್ಥಿತರಿದ್ದರು. ಕಟಪಾಡಿ ಎಸ್.ವಿ.ಎಸ್.ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಟಪಾಡಿ ಗ್ರಾಮ ಪಂಚಾಯಿತಿ ಪಿಡಿಒ ತಿಲಕ್‌ರಾಜ್ ಸ್ವಾಗತಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಡಿ.ಬಂಗೇರ ವಂದಿಸಿದರು.









