Thursday, July 9, 2026
ಸುದ್ದಿ

ಅಮೆರಿಕ ವಿರುದ್ಧ ಇರಾನ್‌ ಪ್ರತೀಕಾರ : ಬಹ್ರೇನ್‌ ನೌಕಾಪಡೆಯ ಪ್ರಧಾನ ಕಚೇರಿ, ಕುವೈತ್‌ನ ಮಿಲಿಟರಿ ನೆಲೆಗಳ ಮೇಲೆ ದಾಳಿ -ಕಹಳೆ ನ್ಯೂಸ್

ಟೆಹ್ರಾನ್‌: ಇರಾನ್‌ನ ಬಂದರು, ಮೂಲ ಸೌಕರ್ಯಗಳನ್ನ ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ ಕೂಡ ಪ್ರತೀಕಾರಕ್ಕೆ ಮುಂದಾಗಿದೆ. ಬಹ್ರೇನ್‌ನಲ್ಲಿರುವ  ಅಮೆರಿಕದ 5ನೇ ನೌಕಾಪಡೆಯ ಪ್ರಧಾನ ಕಚೇರಿ ಹಾಗೂ ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನ ಗುರಿಯಾಗಿಸಿಕೊಂಡು ಇರಾನ್‌ ದಾಳಿ ನಡೆಸಿದೆ.
ಅಮೆರಿಕ ದಾಳಿಗೆ ವಿನಾಶಕಾರಿ ರೀತಿಯಲ್ಲೇ ಪ್ರತಿಕ್ರಿಯೆ ನೀಡುವುದಾಗಿ ಇರಾನ್‌ನ ಕ್ರಾಂತಿಕಾರಿ ಪಡೆ ಪ್ರತಿಜ್ಞೆ ಮಾಡಿದ ಬಳಿಕ ದಾಳಿಗಳು ಸಂಭವಿಸಿದೆ.