Thursday, July 9, 2026
ರಾಜ್ಯಸುದ್ದಿ

ಪ್ರೇಯಸಿಗಾಗಿ ಅಮೆರಿಕದಲ್ಲಿ ಪತ್ನಿ ಕೊಲೆ; ಡೆಡ್‌ಬಾಡಿ ಫೋಟೋ ಲವ್ವರ್‌ಗೆ ಕಳಿಸಿದ ಭಾರತೀಯ ಮೂಲದ ಟೆಕ್ಕಿ -ಕಹಳೆ ನ್ಯೂಸ್

ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತೀಯ ಮೂಲದ ಟೆಕ್ಕಿಯೊಬ್ಬ  ತನ್ನ ಪತ್ನಿಯನ್ನು ಕೊಲೆ ಮಾಡಿ, ಭಾರತದಲ್ಲಿದ್ದ ತನ್ನ ಪ್ರೇಮಿಗೆ ಮೃತದೇಹದ ಫೋಟೋ ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ.
30 ವರ್ಷದ ಅವಿನಾಶ್ ನಾರ್ನೆ ಬಂಧಿತ ಆರೋಪಿ. 27 ವರ್ಷದ ರಾಜಿತಾ ಸಬ್ಬಿನೇನಿ ಮೃತ ಮಹಿಳೆ. ಇಬ್ಬರೂ ಅಮೆರಿಕದಲ್ಲಿ ವಾಸವಾಗಿದ್ದು, 7 ತಿಂಗಳ ಹಿಂದೆಯೇ ಈ ಘಟನೆ ನಡೆದಿದೆ.

ಅಕ್ಟೋಬರ್ 27, 2025ರಂದು ಅವಿನಾಶ್ ಪೊಲೀಸರಿಗೆ ಕರೆ ಮಾಡಿ, ನನ್ನ ಪತ್ನಿ ಬಾತ್‌ರೂಮ್‌ನಲ್ಲಿ ಲಾಕ್ ಆಗಿದ್ದಾಳೆ ಹೊರಗೆ ಬರುತ್ತಿಲ್ಲ ಎಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ರಜಿಯಾ ಶವವಾಗಿ ಪತ್ತೆಯಾಗಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸ್‌ ತನಿಖೆಯಲ್ಲಿ ಅವಿನಾಶ್‌, ತಾನು ಕೆಲಸಕ್ಕೆ ಹೋಗಿ 40 ನಿಮಿಷಗಳ ನಂತರ ನನಗೆ ವಿಷಯ ಗೊತ್ತಾಯಿತು ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಆದರೆ, ಸಿಸಿಟಿವಿ ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಆ ಸಮಯದಲ್ಲಿ ಮನೆಗೆ ಬೇರೆ ಯಾರೂ ಬಂದಿಲ್ಲ ಎಂಬುದು ಗೊತ್ತಾಗಿದೆ.

ಮರಣೋತ್ತರ ಪರೀಕ್ಷೆಯಲ್ಲಿ ರಾಜಿತಾ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ದೃಢಪಟ್ಟಿದೆ. ಬಳಿಕ ಪೊಲೀಸರು ಪ್ರಕರಣವನ್ನು ಕೊಲೆ ಎಂದು ದಾಖಲಿಸಿ ತನಿಖೆ ಮುಂದುವರಿಸಿದಾಗ, ತನಿಖೆ ವೇಳೆ ಅವಿನಾಶ್ ಭಾರತದಲ್ಲಿದ್ದ ಮಹಿಳೆಯೊಬ್ಬಳೊಂದಿಗೆ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದ ಎಂಬುದು ಬೆಳಕಿಗೆ ಬಂದಿದೆ. ರಾಜಿತಾಳನ್ನು ಮದುವೆಯಾದ ಬಳಿಕವೂ ಆ ಸಂಬಂಧ ಮುಂದುವರಿದಿತ್ತು.

ಕೊಲೆ ಮಾಡಿದ ದಿನ ಅವಿನಾಶ್ ತನ್ನ ಪ್ರೇಮಿಗೆ ಹಲವು ಬಾರಿ ಕರೆ ಮಾಡಿದ್ದಾನೆ. ಅಲ್ಲದೆ, ಪತ್ನಿಯ ಮೃತದೇಹದ ಫೋಟೋವನ್ನೂ ಆಕೆಗೆ ಕಳುಹಿಸಿದ್ದಾನೆ.

ಈ ಎಲ್ಲಾ ಸಾಕ್ಷ್ಯಗಳ ಆಧಾರದಲ್ಲಿ ಜುಲೈ 5ರಂದು ಅವಿನಾಶ್ ವಿರುದ್ಧ ಪ್ರಥಮ ದರ್ಜೆ ಕೊಲೆ ಪ್ರಕರಣ ದಾಖಲಿಸಲಾಗಿದೆ.